ಕೊಳ್ಳೇಗಾಲ: ವೈಯಕ್ತಿಕ ಕಾರಣದಿಂದ ಬೇಸತ್ತ ಮಾಜಿ ಸೈನಿಕರೊಬ್ಬರು ಶಿವನಸಮುದ್ರದ ವೆಸ್ಲಿ ಸೇತುವೆಯಿಂದ ನದಿಗೆ ಹಾರಿದ್ದು, ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಮೈಸೂರಿನ ಬೖಂಗೇಶ್ ಎಂಬುವವರೇ ಆತ್ಮಹತ್ಯೆಗೆ ಯತ್ನಿಸಿ ವೇಸ್ಲಿ ಸೇತುವೆಯಿಂದ ನದಿಗೆ ಹಾರಿದ ಮಾಜಿ ಸೈನಿಕರಾಗಿದ್ದಾರೆ.
ಇವರು ಸೇತುವೆಗೆ ಹಾರುತ್ತಿದ್ದಂತೆ ಅಲ್ಲೇ ವೀಕ್ಷಿಸುತ್ತಿದ್ದ ಪ್ರವಾಸಿಗರಾದ ಮಾದೇಶ್, ರತ್ನಮ್ಮ ಮತ್ತು ಶೋಭ ಎಂಬುವವರು ಕೂಗಿಕೊಂಡರು ಎನ್ನಲಾಗಿದೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ತೆಪ್ಪ ನಡೆಸುವವರು, ಬೃಂಗೇಶ್‌ರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬೖಂಗೇಶ್ ಸಾಕಷ್ಟು ಸಾಲ ಮಾಡಿಕೊಂಡು ಸಾಲದ ಸುಳಿಗೆ ಸಿಲುಕಿದ್ದ ಹಿನ್ನೆಲೆಯಲ್ಲಿ
ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಹೇಳಲಾಗಿದೆ





