ಚಾಮರಾಜನಗರ: ಬೈಕ್ ಸವಾರನ ಮೇಲೆ ಏಕಾಏಕಿ ಕಾಡಾನೆಗಳು ದಾಳಿ ನಡೆಸಿರುವ ಘಟನೆ ಚಾಮರಾಜನಗರ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನ ಬಂಡೀಪುರದಲ್ಲಿ ನಡೆದಿದೆ.
ರಸ್ತೆಯಲ್ಲಿ ತೆರಳುತ್ತಿದ್ದ ಬೈಕ್ ಸವಾರನ ಮೇಲೆ ಕಾಡಾನೆಗಳು ದಾಳಿ ನಡೆಸಲು ಮುಂದಾಗಿವೆ. ತಕ್ಷಣ ಎಚ್ಚೆತ್ತ ಬೈಕ್ ಸವಾರ ಸ್ಥಳದಲ್ಲೇ ಬೈಕನ್ನು ಬಿಟ್ಟು ಓಡಿ ಹೋಗಿ ಬಚಾವ್ ಆಗಿದ್ದಾನೆ. ಕೂದಲೆಳೆ ಅಂತದಲ್ಲಿ ಬೈಕ್ ಸವಾರ ಜೀವ ಉಳಿಸಿಕೊಂಡಿದ್ದಾರೆ. ಎದೆ ಝಲ್ ಎನಿಸುವ ಈ ದೃಶ್ಯ ಹಿಂದೆ ಇದ್ದ ವಾಹದಲ್ಲಿದ್ದವರು ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆ ನಡೆಯುತ್ತಿದ್ದಂತೆ ಕೆಲಕಾಲ ಆನೆಗಳ ಹಿಂಡು ರಸ್ತೆಯಲ್ಲಿಯೇ ಬೀಡುಬಿಟ್ಟಿದ್ದು, ವಾಹನ ಸವಾರರು ಜೀವ ಭಯದಲ್ಲಿ ಚಾಲನೆ ಮಾಡುವ ಪರಿಸ್ಥಿತಿ ಎದುರಾಗಿದೆ.