Mysore
17
broken clouds

Social Media

ಮಂಗಳವಾರ, 14 ಜನವರಿ 2025
Light
Dark

ಶಾಸಕರು ಅಭಿವೃದ್ಧಿ ಕಾಮಗಾರಿ ಮಾಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದರೆ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ : ಶಾಸಕ ಆರ್‌. ನರೇಂದ್ರ

ಹನೂರು: ಕ್ಷೇತ್ರ ವ್ಯಾಪ್ತಿಯ 478 ಹಳ್ಳಿಗಳ ಪೈಕಿ ಯಾವುದಾದರೂ ಒಂದು ಗ್ರಾಮದಲ್ಲಿ ಶಾಸಕರು ಯಾವುದೇ ಅಭಿವೃದ್ಧಿ ಕಾಮಗಾರಿ ಮಾಡಿಲ್ಲ ಎಂದು ಗ್ರಾಮಸ್ಥರು ತಿಳಿಸಿದರೇ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ ಎಂದು ಶಾಸಕ ಆರ್. ನರೇಂದ್ರ ಸವಾಲೆಸೆದರು.

ತಾಲ್ಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸುತ್ತಿರುವ ದೊಡ್ಡಮ್ಮ ಚಿಕ್ಕಮ್ಮ ತಾಯಿ ದೇವಸ್ಥಾನದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು

ಹನೂರು ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸ ಮುಖಗಳು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಪ್ರಚಾರ ನಡೆಸುತ್ತಿರುವ ಇವರಿಗೆ ಕ್ಷೇತ್ರದ ವಿಸ್ತೀರ್ಣವೆಷ್ಟು ಹನೂರು ವಿಧಾನಸಭಾ ಕ್ಷೇತ್ರದಲ್ಲಿ ಎಷ್ಟು ಹಳ್ಳಿಗಳಿವೆ ಎಂದು ಹೇಳಲಿ,ಕ್ಷೇತ್ರದಲ್ಲಿ 478 ಹಳ್ಳಿಗಳಿದ್ದು ಜಾಗೇರಿ ಯಿಂದ ಪ್ರಾರಂಭವಾಗಿ ಗೋಪಿನಾಥಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಲಂಬಾಡಿ ಗ್ರಾಮದ ವರೆಗೆ 172 ಕಿಲೋಮೀಟರ್ ವಿಸ್ತೀರ್ಣವಿದೆ. ಕೊಳ್ಳೇಗಾಲದಿಂದ ರಾಜಧಾನಿ ಬೆಂಗಳೂರಿಗೆ 140 ಕಿ.ಮೀ ದೂರವಿದೆ. ನನ್ನ ಕ್ಷೇತ್ರ 172 km ವ್ಯಾಪ್ತಿ ಇದೆ. ಪ್ರತಿಯೊಬ್ಬ ಮತದಾರರು ಹಣಕ್ಕಾಗಿ ತಮ್ಮ ಮತ ಚಲಾಯಿಸಬಾರದು,ಅವರು ನೀಡಿರುವ ಹಣ ಕೇವಲ 1ದಿನಕ್ಕಷ್ಟೇ ಸೀಮಿತ, ಕ್ಷೇತ್ರದಲ್ಲಿ ಅಭಿವೃದ್ಧಿ ಮಾಡುವುದು ಎರಡನೇ ವಿಚಾರ, ಆದರೆ ಕ್ಷೇತ್ರದಲ್ಲಿರುವ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳಲು 5 ವರ್ಷಗಳ ಸಮಯ ಬೇಕು ನಮ್ಮದು ವಿಶೇಷವಾದ ಕ್ಷೇತ್ರ,ಪ್ರತಿದಿನ ಜನರ ಮಧ್ಯೆ ನಿಂತು ಕೆಲಸ ಮಾಡುವ ಜನಪ್ರತಿನಿಧಿಗಳಿಗೆ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಅರಿವಿರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಬಸವರಾಜು, ಪಪಂ ಉಪಾಧ್ಯಕ್ಷ ಗಿರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ದೇವರಾಜು,ಈಶ್ವರ್ ಬಲಿಜ ಸಂಘದ ಅಧ್ಯಕ್ಷ ರಂಗಸ್ವಾಮಿ,ಕೌದಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗರಾಜು, ಸದಸ್ಯ ವಾಜಿದ್ , ಶರತ್,ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಚೇತನ್ ದೊರೆರಾಜ್ ಮುಖಂಡರುಗಳಾದ ಮಹಬೂಬ್ ಷರೀಪ್,ಮಂಜು, ಚಾಂದ್ ಪಾಷಾ, ಗೋವಿಂದ ಸೇರಿದಂತೆ ಇನ್ನಿತರರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ