Mysore
23
haze

Social Media

ಶುಕ್ರವಾರ, 30 ಜನವರಿ 2026
Light
Dark

ಭಾವಚಿತ್ರ ವಿರೂಪ : ಕಠಿಣ ಶಿಕ್ಷೆಗೆ ನಿರಂಜನ್‌ಕುಮಾರ್ ಆಗ್ರಹ

ಚಾಮರಾಜನಗರ : ತಾಲ್ಲೂಕಿನ ಜ್ಯೋತಿಗೌಡನಪುರ ಗ್ರಾಮಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಮಾಜಿ ಶಾಸಕ ಸಿ.ಎಸ್.ನಿರಂಜನ್‌ಕುಮಾರ್, ನಗರಸಭಾ ಅಧ್ಯಕ್ಷ ಸುರೇಶ್ ಹಾಗೂ ಪಕ್ಷದ ಮುಖಂಡರು ಭೇಟಿ ನೀಡಿ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಶನಿವಾರ ಭಾಗಿಯಾದರು.

ಈ ಸಂದರ್ಭದಲ್ಲಿ ನಿರಂಜನ್‌ಕುಮಾರ್ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ಹಾಗೂ ಬುದ್ಧ ವಿಗ್ರಹ ವಿರೂಪಗೊಳಿಸಿರುವುದು ದೇಶವೇ ಖಂಡಿಸುವ ವಿಚಾರವಾಗಿದೆ. ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಈ ಕೃತ್ಯ ಎಸಗಿದವರಿಗೆ ದೊಡ್ಡಮಟ್ಟದ ಶಿಕ್ಷೆ ಆಗಬೇಕು. ಅವರನ್ನು ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.

ಕಾಡಾ ಮಾಜಿ ಅಧ್ಯಕ್ಷ ನಿಜಗುಣರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಪಿ.ವೃಷಭೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಹೊನ್ನೂರು ಮಹದೇವಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಶಿವವಿರಾಟ್, ನಟರಾಜು, ನಗರಸಭಾ ಸದಸ್ಯ ಚಂದ್ರಶೇಖರ್, ಕಾಡಳ್ಳಿ ಕುಮಾರ್, ಸೂರ್ಯಕುಮಾರ್, ಹೂoಗನೂರು ಮಹದೇವಸ್ವಾಮಿ, ವೇಣುಗೋಪಾಲ್, ಶೇಷಪ್ಪ ಪಾಸ್ವಾನ್, ನಿಂಗನಾಯಕ, ಗಂಗಾಧರ್, ಚಿಕ್ಕಣ್ಣ, ಶಿವಮಲ್ಲು, ಬಸವಣ್ಣನಾಯಕ, ಮೊದಲಾದವರು ಹಾಜರಿದ್ದರು.

Tags:
error: Content is protected !!