ಗುಂಡ್ಲುಪೇಟೆ: ಬೇಗೂರು ಸಮೀಪ ಕುರುಬರಹುಂಡಿ ಗ್ರಾಮದಲ್ಲಿ ಬೀದಿ ನಾಯಿ ದಾಳಿಯಿಂದ ಜಿಂಕೆ ಒಂದು ಪ್ರಾಣಪಾಯದಿಂದ ಪಾರಾದ ಘಟನೆ ನಡೆದಿದೆ.
ಮೇವನ್ನು ಹರಸಿ ನಾಡಿಗೆ ಬಂದ ಜಿಂಕೆಯನ್ನು ಬೀದಿ ನಾಯಿಗಳು ಅಟ್ಟಾಡಿಸಿಕೊಂಡು ದಾಳಿ ಮಾಡಲು ಹೋದಾಗ ಪ್ರಾಣವನ್ನು ಉಳಿಸಿಕೊಳ್ಳಲು ಓಡಿಹೋದ ಜಿಂಕೆಯು ಗ್ರಾಮದ ಪ್ರಭುಸ್ವಾಮಿ ಎಂಬುವರ ಮನೆಯಲ್ಲಿ ಆಶ್ರಯ ಪಡೆಯಿತು.
ಮಾಹಿತಿ ತಿಳಿದ ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ಜಿಂಕೆಯನ್ನು ಕಾಡಿಗೆ ಬಿಡುವ ವ್ಯವಸ್ಥೆಯನ್ನು ಮಾಡಿದರು.





