ಹನೂರು: ಮಲೆಮಹದೇಶ್ವರ ವನ್ಯಜೀವಿಧಾಮದ ಮೀಣ್‌ಯಂನಲ್ಲಿ ಹುಲಿಗಳ ಆಸ್ಪತ್ರೆಯಲ್ಲಿ ಅರಣ್ಯ ಇಲಾಖೆಯ ನಿರ್ಲಕ್ಷ್ಯವೂ ಇದೆ ಎಂದು ಮಾಜಿ ಶಾಸಕ ನರೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ಕೊಳ್ಳೇಗಾಲದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು, ಮಲೆ ಮಹದೇಶ್ವರ ವನ್ಯಜೀವಿಧಾಮದ ಡಿಸಿಎಫ್ ಚಕ್ರಪಾಣಿ ಅವರ ಕಾರ್ಯ ನಿರ್ವಹಣೆಯಿಂದಲೇ ಈ ರೀತಿ ಅವಘಡ ಉಂಟಾಗಿದೆ. ಜನರು ಹಾಗೂ ಕೆಳಹಂತದ ಅಧಿಕಾರಿಗಳ ವಿರುದ್ಧ ಉತ್ತಮ ಸ್ಪಂದನೆ ಇಲ್ಲ ಎಂದು ಕೆಳಹಂತದ ಅಧಿಕಾರಿಗಳ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಅಧ್ಯಯನ ಮಾಡುತ್ತಿದ್ದಾರೆ.
ಹಸುವಿನ ಮೇಲೆ ದಾಳಿಯಾದ ಕೂಡಲೇ ಹಸು ಕಳೆಬರವನ್ನು ವಿಲೇವಾರಿ ಮಾಡಬೇಕಿತ್ತು. ಜನರ ಜೊತೆ ಉತ್ತಮ ಸ್ಪಂದನೆ ಇಟ್ಟುಕೊಂಡಿದ್ದರೆ ಈ ರೀತಿ ದುರ್ಘಟನೆ ನಡೆಯುತ್ತಿಲ್ಲ. ವಿಷ ಹಾಕಿದವರ ಜೊತೆಗೆ ಅಧಿಕಾರಿಗಳ ವಿರುದ್ಧವೂ ತನಿಖೆಯಾಗಿ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.
ಇನ್ನು ಮುಂದುವರಿದು ಮಾತನಾಡಿದ ಅವರು, ಕರ್ನಾಟಕದ ಕಾಡು ತಮಿಳುನಾಡಿನ ದನಗಳಿಗೆ ಮೇವಿನ ತಾಣವಾಗಿದೆ. ಗುತ್ತಿಗೆ ಮೇಲೆ ತಮಿಳುನಾಡಿನ ಹಸುಗಳನ್ನು ತಂದು ಕಾಡಂಚಿನ ಜನರು ಸಾಕುತ್ತಿದ್ದಾರೆ. ತಮಿಳುನಾಡಿನ ದನಗಳನ್ನು ತಂದು ಸಾಕಲು ಕಡಿವಾಣ ಹಾಕಬೇಕು ಎಂದು ಹೇಳಿದರು.





