ಚಾಮರಾಜನಗರ: ಅರಣ್ಯ ಇಲಾಖೆ ಗಸ್ತು ನಡೆಸುವ ವೇಳೆ ತಾಯಿಯಿಂದ ಬೇರ್ಪಟ್ಟ ಮೂರು ಹುಲಿಗಳು ಪತ್ತೆಯಾಗಿರುವ ಘಟನೆ ಚಾಮರಾಜನಗರ ತಾಲ್ಲೂಕಿನ ಪುಣಜನೂರು-ಬೇಡಗುಳಿ ರಸ್ತೆಯಲ್ಲಿ ನಡೆದಿದೆ.
ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ನಡೆಸುವಾಗ ಮೂರು ಹುಲಿ ಮರಿಗಳು ಅಲೆದಾಡುವುದನ್ನು ಗಮನಿಸಿದ್ದಾರೆ. ತಾಯಿ ಹುಲಿ ಕುರುಹು ಇಲ್ಲದಿರುವುದನ್ನು ಖಚಿತಪಡಿಸಿಕೊಂಡು ವಲಯ ಅರಣ್ಯಾಧಿಕಾರಿಗಳಿಗೆ ವಿಚಾರ ತಿಳಿಸಿದ್ದಾರೆ.
ಇದನ್ನು ಓದಿ: ದಮ್ಮನಕಟ್ಟೆ ಸಫಾರಿ ವೇಳೆ ಕಾಣಿಸಿಕೊಂಡ ಹುಲಿ: ಪ್ರವಾಸಿಗರು ಫುಲ್ ಖುಷ್
ತಾಯಿ ಹುಲಿ ಪತ್ತೆ ಹಾಗೂ ಮರಿಗಳ ನಿಗಾಕ್ಕಾಗಿ ಮೇಲುಸ್ತುವಾರಿ ಸಮಿತಿಯನ್ನು ರಚನೆ ಮಾಡಲಾಗಿದ್ದು, ತಾಯಿ ಹುಲಿಗಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಪತ್ತೆಯಾದ ಹುಲಿ ಮರಿಗಳೆಲ್ಲವೂ ಸುಮಾರು 30 ದಿನಗಳ ಮರಿಗಳಾಗಿದ್ದು, ತಾಯಿ ಹುಲಿ ಮೇಲೆ ಹದ್ದಿನ ಕಣ್ಣಿಡಲಾಗಿದೆ.





