ಚಾಮರಾಜನಗರ: ಮೇಕೆಗಳನ್ನು ಭಾಗ ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ತಂದೆಯನ್ನೇ ಪುತ್ರ ಮಹಾಶಯನೋರ್ವ ಕೊಲೆ ಮಾಡಿ ನದಿಗೆ ತಳ್ಳಿರುವ ಘಟನೆ ಹನೂರು ತಾಲ್ಲೂಕಿನ ಗೋಪಿನಾಥಂ ಸಮೀಪದ ಆತೂರು ಗ್ರಾಮದಲ್ಲಿ ನಡೆದಿದೆ.
ಶಂಕರನ್ ಎಂಬುವವರೇ ಹತ್ಯೆಯಾದವರಾಗಿದ್ದಾರೆ. ಇವರ ಎರಡನೇ ಮಗ ಗೋವಿಂದರಾಜ್ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ.
ಮೇಕೆಗಳನ್ನು ಭಾಗ ಮಾಡುವ ವಿಚಾರಕ್ಕೆ ಶಂಕರನ್ ಹಾಗೂ ಗೋವಿಂದರಾಜ್ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಗೋವಿಂದರಾಜ್ ಬಲವಾದ ಆಯುಧನಿಂದ ಶಂಕರನ್‌ಗೆ ಗಾಯಗೊಳಿಸಿ ನದಿಗೆ ಎಸೆದಿದ್ದನು.
ಶಂಕರನ್ ಮನೆಗೆ ಬಾರದ ಹಿನ್ನೆಲೆಯಲ್ಲಿ ಕುಟುಂಬದವರು ಪೊಲೀಸ್ ಠಾಣೆಗೆ ನಾಪತ್ತೆ ದೂರು ನೀಡಿದ್ದರು. ಕಳೆದ ಸಂಜೆ ಕಾವೇರಿ ನದಿಯಲ್ಲಿ ಶಂಕರನ್ ಮೃತದೇಹ ಪತ್ತೆಯಾಗಿದೆ. ಮೃತರ ಪತ್ನಿಯ ದೂರಿನ ಮೇರೆಗೆ ವಿಚಾರಣೆ ನಡೆಸಿದಾಗ ಆರೋಪಿ ಗೋವಿಂದರಾಜ್ ಸತ್ಯ ಬಾಯ್ಬಿಟ್ಟಿದ್ದಾನೆ. ಈ ಸಂಬಂಧ ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





