Mysore
27
scattered clouds
Light
Dark

ಚಾಮರಾಜನಗರ: ವಿವಿಧೆಡೆ ಅಕ್ರಮ ಮದ್ಯ ಮಾರಾಟ, ಸಾಗಾಣಿಕೆ : ದೂರು ದಾಖಲು

ಚಾಮರಾಜನಗರ: ಜಿಲ್ಲೆಯಲ್ಲಿ ಅಕ್ರಮ ಮದ್ಯ ಮಾರಾಟವನ್ನು ಪರಿಣಾಮಕಾರಿಯಾಗಿ ತಡೆಯುವ ಸಲುವಾಗಿ ಜಿಲ್ಲೆಯ ವಿವಿಧೆಡೆ ಕಾರ್ಯಚರಣೆ ನಡೆಸಿ, ಅಕ್ರಮವಾಗಿ ಮದ್ಯ ಸಾಗಾಣಿಕೆ ಮಾಡುತ್ತಿದ್ದವರ ಬಳಿ ಮದ್ಯದ ಪಾಕಿಟ್‌ಗಳನ್ನು ವಶಪಡಿಸಿಕೊಂಡು ದೂರು ದಾಖಲಿಸಲಾಗಿದೆ.

ಯಳಂದೂರು ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ಹನಮಂತ ಉಪ್ಪಾರ್ ರವರಿಗೆ ದೊರೆತ ಮಾಹಿತಿ ಮೇರೆಗೆ ಆಗಸ್ಟ್ ೨೭ರಂದು ಬೆಳಿಗ್ಗೆ ೧೧.೩೫ ಗಂಟೆ ಸಮಯದಲ್ಲಿ ಕಂದಹಳ್ಳಿ ಗ್ರಾಮದ ಅಂಬಳೆ ಪಾಲದ ಮುಂಭಾಗ ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡಲು ಅವಕಾಶ ಮಾಡಿಕೊಡುತಿದ್ದ ವ್ಯಕ್ತಿಯೋರ್ವನಿಂದ ೯೯೯.೨೫ ರೂ. ಮೌಲ್ಯದ ೯೦ ಎಂ.ಎಲ್.ನ ೨೫ ಮದ್ಯದ ಪೌಚ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ಸಂತೇಮರಹಳ್ಳಿ ಪೊಲೀಸ್ ಠಾಣೆಯ ಆರಕ್ಷಕ ಉಪನಿರೀಕ್ಷಕರಾದ ತಾಜುದ್ದೀನ್ ರವರಿಗೆ ದೊರೆತ ಮಾಹಿತಿ ಮೇರೆಗೆ ಆಗಸ್ಟ್ ೨೭ರಂದು ರಾತ್ರಿ ೭.೧೫ರ ಸಮಯದಲ್ಲಿ ಹುಲ್ಲೇಪುರ ಗ್ರಾಮದ ಹತ್ತಿರ ಇರುವ ಕಬಿನಿ ಚಾನಲ್ ಸೇತುವೆ ಬಳಿ ಚುಂಗಡಿಪುರ ಹುಲ್ಲೇಪುರ ರಸ್ತೆಯಲ್ಲಿ ವ್ಯಕ್ತಿಯೋರ್ವ ಮೋಟಾರು ಬೈಕ್ಲ್ಲಿ ಅಕ್ರಮವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದ ೧೯೧೯ ರೂ. ಮೌಲ್ಯದ ೯೦ ಎಂ.ಎಲ್. ಸಾಮರ್ಥ್ಯದ ೪೮ ಟೆಟ್ರಾಪ್ಯಾಕ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.

ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ದಿವಾಕರ್.ಎಂ. ರವರಿಗೆ ದೊರೆತ ಮಾಹಿತಿ ಮೇರೆಗೆ ಆಗಸ್ಟ್ ೨೭ರಂದು ಬೆಳಿಗ್ಗೆ ೯.೩೦ ಗಂಟೆ ಸಮಯದಲ್ಲಿ ಜ್ಯೋತಿಗೌಡನ ಪುರ ಗ್ರಾಮದ ಮಾರಮ್ಮ ದೇವಸ್ಥಾನದ ಬಳಿ ಸಾರ್ವಜನಿಕ ಸ್ಥಳದಲ್ಲಿ ಲೈಸೆನ್ಸ್ ಇಲ್ಲದೆ ಅಕ್ರಮವಾಗಿ ಮದ್ಯದ ಪೌಚ್‌ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನಿಂದ ೯೦ ಎಂಎಲ್‌ನ (೧.೮ಲೀ) ೧೨ ಪೌಚ್‌ಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.