ಚಾಮರಾಜನಗರ: ಜಮೀನಿಗೆ ತೆರಳಿದ್ದ ರೈತನ ಮೇಲೆ ಕಾಡೆಮ್ಮೆ ದಾಳಿ ನಡೆಸಿರುವ ಘಟನೆ ಗುಂಡ್ಲುಪೇಟೆ ತಾಲ್ಲೂಕಿನ ಕುಂದಕೆರೆ ಗ್ರಾಮದಲ್ಲಿ ನಡೆದಿದೆ.
ಇಂದು ಬೆಳಿಗ್ಗೆ ಈ ಘಟನೆ ನಡೆದಿದ್ದು, ರೈತ ಪಾಲಾಕ್ಷ ಎಂಬುವವರೇ ಗಾಯಗೊಂಡಿರುವ ರೈತರಾಗಿದ್ದಾರೆ.
ಕಳೆದ ತಡರಾತ್ರಿ ಭಾರೀ ಮಳೆಯಾದ ಪರಿಣಾಮ ಬೆಳ್ಳಂಬೆಳಿಗ್ಗೆ ಜಮೀನು ನೋಡಲು ಹೋದಾಗ ಹಠಾತ್ತನೇ ಬಂದ ಕಾಡೆಮ್ಮೆ ಪಾಲಾಕ್ಷ ಅವರ ಮೇಲೆ ಏಕಾಏಕಿ ದಾಳಿ ನಡೆಸಿದೆ.
ಪಾಲಾಕ್ಷ ಅವರ ತೊಡೆ ಹಾಗೂ ಕತ್ತಿನ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.





