ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಜಾನುವಾರು ಗಣತಿ ಕಾರ್ಯ ನಡೆಯುತ್ತಿದ್ದು, ರೈತರಿಂದಲೂ ಉತ್ತಮ ಸ್ಪಂದನೆ ಸಿಕ್ಕಿದೆ.
ಇದೇ ಅಕ್ಟೋಬರ್.25ರಿಂದ ಫೆಬ್ರವರಿ.25ರವರೆಗೆ ಜಾನುವಾರು ಗಣತಿ ಕಾರ್ಯ ನಡೆಯಲಿದ್ದು, ರೈತರು ಸಾಕಿರುವ ಹಸು, ಎಮ್ಮೆ, ಆಡು, ಕುರಿಗಳನ್ನು ಲೆಕ್ಕಾಚಾರ ಮಾಡಲಾಗುತ್ತದೆ.
ರೈತರ ಮನೆ ಮನೆಗೆ ತೆರಳಿ ಅನ್ನದಾತನಿಂದ ಸಂಪೂರ್ಣ ವರದಿ ಕೇಳಲಾಗುತ್ತದೆ.
ರೈತರ ಮನೆ ಮನೆಗೆ ತೆರಳುವ ಸಂಬಂಧಪಟ್ಟ ಅಧಿಕಾರಿಗಳು, ರೈತರ ಬಳಿ ಸಮಗ್ರ ಮಾಹಿತಿ ಕಲೆಹಾಕುತ್ತಿದ್ದು, ಚಾಮರಾಜನಗರದಲ್ಲಿ ರೈತರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.