Mysore
29
clear sky

Social Media

ಮಂಗಳವಾರ, 20 ಜನವರಿ 2026
Light
Dark

ಹಳ್ಳಕ್ಕೆ ಬಿದ್ದ ಕಾರು : ಐವರು ಗಂಭೀರ

ಕೊಳ್ಳೇಗಾಲ : ಮಹದೇಶ್ವರ ಬೆಟ್ಟದಿಂದ ಬರುವಾಗ ಮಧುವನಹಳ್ಳಿ-ದೊಡ್ಡಿಂದುವಾಡಿ ರಸ್ತೆ ಮಧ್ಯೆ ಕಾರು ಚಾಲಕ ನಿದ್ರೆಗೆ ಜಾರಿದ್ದರಿಂದ ಕಾರು ಹಳ್ಳಕ್ಕೆ ಬಿದ್ದು ಐವರು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.

ಮಂಡ್ಯ ಜಿಲ್ಲೆಯ ಸ್ವರ್ಣಸಂದ್ರ ಬಡಾವಣೆ ವಾಸಿಗಳಾದ ಪ್ರಸನ್ನ, ಕೆಂಪರಾಜು, ತಿಮ್ಮೇಗೌಡ, ಚಾಮುಂಡೇಶ್ವರಿ ನಗರ ವಾಸಿ ಮಂಜುನಾಥ್, ಸುಂಡ್ರಳ್ಳಿಯ ಕೆಂಪರಾಜು ಗಾಯಗೊಂಡವರು. ಇವರಲ್ಲಿ ತಿಮ್ಮೇಗೌಡ ಎಂಬವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನು ಓದಿ: ಜಾತಿಗಣತಿ ಕಾರ್ಯಕ್ಕೆ ತೆರಳುತ್ತಿದ್ದ ಇಬ್ಬರು ಶಿಕ್ಷಕರಿಗೆ ಅಪಘಾತ

ಇವರೆಲ್ಲ ಶಬರಿಮಲೆ ಯಾತ್ರೆ ಮುಗಿಸಿ ವಾಪಸ್ ಮಂಡ್ಯಕ್ಕೆ ಹೋಗುವ ಮೊದಲು ಮ.ಬೆಟ್ಟಕ್ಕೆ ತೆರಳಿ ಮಾದಪ್ಪನ ದರ್ಶನ ಮುಗಿಸಿ ಮಧುವನಹಳ್ಳಿ-ದೊಡ್ಡಿಂದುವಾಡಿ ರಸ್ತೆ ಮಧ್ಯೆ ಕಾರು ಚಾಲಕ ನಿದ್ರೆಗೆ ಜಾರಿದ್ದು, ಕಾರು ಹಳ್ಳಕ್ಕೆ ಬಿದ್ದಿದೆ.

ಘಟನೆಯಲ್ಲಿ ಕಾರಿನಲ್ಲಿದ್ದ ಐವರು ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

Tags:
error: Content is protected !!