ಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಅರಣ್ಯದಲ್ಲಿ ನೂತನ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ.
ಈ ಬಾರಿ ವಾಸ್ತವ್ಯದ ಜೊತೆಗೆ ಸಫಾರಿಗೂ ಕೂಡ ಬ್ರೇಕ್ ಬಿದ್ದಿದ್ದು, ವನ್ಯಜೀವಿ ಪ್ರಿಯರಿಗೆ ವನ್ಯಪ್ರಾಣಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ಸಿಗುವುದಿಲ್ಲ.
ಹೊಸ ವರ್ಷಾಚರಣೆ ನೆಪದಲ್ಲಿ ಬಂಡೀಪುರ ಅರಣ್ಯದಲ್ಲಿ ಪ್ರವಾಸಿಗರು ವಾಸ್ತವ್ಯ ಹೂಡಿ ಮೋಜು ಮಸ್ತಿ ಮಾಡಿ ಕಾಡಿನಲ್ಲಿರುವ ಪ್ರಾಣಿಗಳ ಸಹಜ ಜೀವನಕ್ಕೆ ಅಡ್ಡಿಯುಂಟು ಮಾಡುತ್ತಾರೆ ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ವರ್ಷದ ಕೊನೆಯ ದಿನ ಹಾಗೂ ಹೊಸ ವರ್ಷದ ಮೊದಲ ದಿನ ಬಂಡೀಪುರದ ಅರಣ್ಯ ಇಲಾಖೆ ಕಾಟೇಜ್‌ಗಳಲ್ಲೂ ವಾಸ್ತವ್ಯಕ್ಕೆ ಬ್ರೇಕ್ ಹಾಕಲಾಗಿದೆ. ಇದರಿಂದಾಗಿ ಈ ಬಾರಿಯೂ ಕೂಡ ಬಂಡೀಪುರದಲ್ಲಿ ಹೊಸ ವರ್ಷ ಆಚರಣೆ ಮೋಜು-ಮಸ್ತಿಗೆ ಪ್ಲಾನ್ ಮಾಡಿದ್ದ ಪ್ರವಾಸಿಗರಿಗೆ ನಿರಾಸೆ ಉಂಟಾಗಿದೆ.





