ಕೊಳ್ಳೇಗಾಲ : ತಾಲ್ಲೂಕಿನ ಚಿಲಕವಾಡಿ ಗ್ರಾಮದ ರಸ್ತೆಯಲ್ಲಿ ಬುಧವಾರ ಬೆಳಗಿನ ಜಾವ ನಸುಕಿನಲ್ಲಿ ನಿಂತಿದ್ದ ಟ್ರಾಕ್ಟರ್‌ಗೆ ಗುಂಡೇಗಾಲದಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ಪೋಷಕರೊಡನೆ ತೆರಳುತ್ತಿದ್ದ ನಾಲ್ಕೂವರೆ ವರ್ಷದ ಹೆಣ್ಣು ಮಗು ಸಾವನ್ನಪ್ಪಿರುವ ಘಟನೆ ನಡೆದಿದೆ.
ಗುಂಡೇಗಾಲ ಗ್ರಾಮದ ಹರ್ಷಿತಾ ನಾಯಕ ಮೃತಪಟ್ಟ ಮಗು. ಬೈಕ್‌ನಲ್ಲಿದ್ದ ಈಕೆಯ ತಂದೆ ನಂಜುಂಡಸ್ವಾಮಿ ಹಾಗೂ ತಾಯಿ ಕಾವ್ಯ ಗಾಯಗೊಂಡಿದ್ದಾರೆ. ಈ ಸಂಬಂಧ ಅಗರ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆ ನಂತರ ಪರಾರಿಯಾಗಿರುವ ಟ್ರಾಕ್ಟರ್ ಪತ್ತೆಗೆ ಕ್ರಮ ಜರುಗಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ ಭೇಟಿ ನೀಡಿ, ಮಹಜರ್ ನಡೆಸಿದರು. ಈ ಸಂದರ್ಭದಲ್ಲಿ ಎಸ್‌ಐ ಕರಿಬಸಪ್ಪ ಹಾಜರಿದ್ದರು.





