ಚಾಮರಾಜನಗರ : ಭೀಮನ ಅಮಾವಾಸ್ಯೆ ಹಿನ್ನಲೆ ಪ್ರಸಿದ್ದ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜಾ ವಿಧಿ ವಿಧಾನಗಳು ನಡೆಯುತ್ತಿದೆ. ಮಾದಪ್ಪನನ್ನು ಕಣ್ತುಂಬಿಕೊಳ್ಳಲು ಬೆಟ್ಟದಲ್ಲಿ ಎತ್ತ ನೋಡದರತ್ತ ಭಕ್ತ ಸಮೂಹವೇ ಕಾಣುತ್ತಿದೆ.
ದೇವಾಲಯ ಸೇರಿದಂತೆ ವಿವಿಧ ಕಡೆಗಳಲ್ಲಿ ವೈವಿಧ್ಯಮಯವಾಗಿ ದೀಪಾಲಂಕಾರ ಮಾಡಲಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ. ಮಾದಪ್ಪನಿಗೆ ಎಣ್ಣೆ ಮಜ್ಜನ ಹಾಗೂ ವಿವಿಧ ಅಭಿಷೇಕ ಸೇವೆ ಮಾಡಲಾಗುತ್ತಿದ್ದು, ಬಗೆ ಬಗೆ ಹೂವುಗಳಿಂದ ದೇಗುಲಕ್ಕೆ ಅಲಂಕಾರ ಮಾಡಲಾಗಿದೆ.
ಭಕ್ತಾಧಿಗಳಿಗೆ ಪ್ರಾಧಿಕಾರದ ವತಿಯಿಂದ ಸಕಲ ವ್ಯವಸ್ಥೆ ಮಾಡಲಾಗಿದ್ದು, ಸಾಗರೋಪಾದಿಯಲ್ಲಿ ಭಕ್ತರ ದಂಡು ಬೆಟ್ಟಕ್ಕೆ ಹರಿದು ಬರುತ್ತಿದೆ. ಇಂದು ಮತ್ತು ನಾಳೆ ಲಕ್ಷಾಂತರ ಭಕ್ತಾಧಿಗಳ ಆಗಮನದ ನಿರೀಕ್ಷೆಯೂ ಇದೆ. ಈ ಹಿನ್ನೆಲೆ ಕೆ.ಎಸ್.ಆರ್.ಟಿಸಿ ವತಿಯಿಂದ 300 ವಿಶೇಷ ಬಸ್ ಗಳನ್ನು ನಿಯೋಜನೆ ಮಾಡಲಾಗಿದೆ.
ಇನ್ನೂ ಯಾವುದೆ ಅಹಿತಕರ ಘಟನೆ ನೆಡೆಯದಂತೆ ಪೊಲೀಸ್ ಕಣ್ಗಾವಲು ಸಹ ಇದೆ.




