ಚಾಮರಾಜನಗರ : ಚಾಮರಾಜಗರ ಜಿಲ್ಲಾ ಹಾಲು ಉತ್ಪಾದಕರಿಗೆ ಚಾಮುಲ್ ದೀಪಾವಳಿ ಕೊಡುಗೆ ನೀಡಿದ್ದು, ಹಾಲು ಉತ್ಪಾದಕರಿಗೆ ನಾಳೆಯಿಂದ ಪ್ರತಿ ಲೀಟರ್ ಹಾಲಿಗೆ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಪ್ರತಿ ಲೀಟರ್ ಹಾಲಿಗೆ ರೂ. 26.85 ನೀಡಲಾಗುತಿತ್ತು. ನಾಳೆಯಿಂದ ಲೀಟರ್ ಹಾಲಿಗೆ 28.85 ನೀಡಿ ಖರೀದಿ ಮಾಡಲಾಗುತ್ತಿದೆ. ರಾಸುಗಳಿಗೆ ಚರ್ಮಗಂಟು ರೋಗದಿಂದ ಹಾಲಿನ ಇಳುವರಿ ಕುಂಠಿತವಾಗಿತ್ತು. ಹಾಗಾಗಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ದರ ಹೆಚ್ಚಳ ಮಾಡಲಾಗಿದೆ ಎಂದು ಚಾಮುಲ್ ಅಧ್ಯಕ್ಷ ವೈಸಿ ನಾಗೇಂದ್ರ ಮಾಹಿತಿ ನೀಡಿದರು.
ರಾಸುಗಳಿಗೆ ಚರ್ಮಗಂಟು ರೋಗದಿಂದ ಹಾಲಿನ ಇಳುವರಿ ಕುಂಠಿತವಾಗಿತ್ತು. ಹಾಗಾಗಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ದರ ಹೆಚ್ಚಳ ಮಾಡಲಾಗಿದೆ ಎಂದು ಚಾಮುಲ್ ಅಧ್ಯಕ್ಷ ವೈಸಿ ನಾಗೇಂದ್ರ ಮಾಹಿತಿ ನೀಡಿದರು.