Mysore
27
broken clouds

Social Media

ಭಾನುವಾರ, 01 ಮಾರ್ಚ್ 2026
Light
Dark

ಹಾಲು ಉತ್ಪಾದಕರಿಗೆ ಚಾಮುಲ್ ದೀಪಾವಳಿ ಗಿಫ್ಟ್, ಪ್ರತಿ ಲೀಟರ್ ಹಾಲಿಗೆ 2ರೂ. ಹೆಚ್ಚಳ

ಚಾಮರಾಜ‌ನಗರ : ಚಾಮರಾಜ‌ಗರ ಜಿಲ್ಲಾ ಹಾಲು ಉತ್ಪಾದಕರಿಗೆ ಚಾಮುಲ್ ದೀಪಾವಳಿ ಕೊಡುಗೆ ನೀಡಿದ್ದು, ಹಾಲು ಉತ್ಪಾದಕರಿಗೆ ನಾಳೆಯಿಂದ ಪ್ರತಿ ಲೀಟರ್ ಹಾಲಿಗೆ ಎರಡು ರೂಪಾಯಿ ಹೆಚ್ಚಳ ಮಾಡಲಾಗಿದೆ. ಈ ಹಿಂದೆ ಪ್ರತಿ ಲೀಟರ್​ ಹಾಲಿಗೆ ರೂ. 26.85 ನೀಡಲಾಗುತಿತ್ತು. ನಾಳೆಯಿಂದ ಲೀಟರ್ ಹಾಲಿಗೆ 28.85 ನೀಡಿ ಖರೀದಿ ಮಾಡಲಾಗುತ್ತಿದೆ. ರಾಸುಗಳಿಗೆ ಚರ್ಮಗಂಟು ರೋಗದಿಂದ ಹಾಲಿನ ಇಳುವರಿ ಕುಂಠಿತವಾಗಿತ್ತು. ಹಾಗಾಗಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ದರ ಹೆಚ್ಚಳ ಮಾಡಲಾಗಿದೆ ಎಂದು ಚಾಮುಲ್ ಅಧ್ಯಕ್ಷ ವೈಸಿ ನಾಗೇಂದ್ರ ಮಾಹಿತಿ ನೀಡಿದರು.

ರಾಸುಗಳಿಗೆ ಚರ್ಮಗಂಟು ರೋಗದಿಂದ ಹಾಲಿನ ಇಳುವರಿ ಕುಂಠಿತವಾಗಿತ್ತು. ಹಾಗಾಗಿ ಹಾಲು ಉತ್ಪಾದಕರನ್ನು ಪ್ರೋತ್ಸಾಹಿಸಲು ದರ ಹೆಚ್ಚಳ ಮಾಡಲಾಗಿದೆ ಎಂದು ಚಾಮುಲ್ ಅಧ್ಯಕ್ಷ ವೈಸಿ ನಾಗೇಂದ್ರ ಮಾಹಿತಿ ನೀಡಿದರು. 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!