ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ. ನಗದು ಹಾಗೂ ಚಿನ್ನಾಭರಣ, ಸಿಸಿ ಕ್ಯಾಮೆರಾಗಳನ್ನು ದೋಚಿರುವ ಘಟನೆ ನಡೆದಿದೆ.
ದೇಗುಲದ ಬಾಗಿಲನ್ನು ಒಡೆದಿರುವ ಕಳ್ಳರು, ಅಲ್ಲಿದ್ದ ಎರಡು ಹುಂಡಿಗಳನ್ನು ದೇಗುಲದ ಹೊರ ಭಾಗಕ್ಕೆ ತಂದು, ಅದನ್ನು ಕಬ್ಬಿಣದ ರಾಡ್‌ಗಳ ಮೂಲಕ ಒಡೆದು, ಅದರಲ್ಲಿದ್ದ ಲಕ್ಷಾಂತರ ರೂ.ಗಳನ್ನು ದೋಚಿ ಅಲ್ಲೇ ಬೀಸಾಡಿದ್ದಾರೆ.
ಅಲ್ಲದೆ ದೇವಸ್ಥಾನದ ಉತ್ಸವಮೂರ್ತಿಯಲ್ಲಿದ್ದ ಚಿನ್ನದ ತಾಳಿ ಬೊಟ್ಟುಗಳನ್ನು ಸಹ ದೋಚಿದ್ದಾರೆ. ಇದರೊಂದಿಗೆ ಚಾಲಾಕಿ ಕಳ್ಳರು ಸಿಸಿ ಕ್ಯಾಮೆರಾ, ಡಿವಿಆರ್‌ನ್ನು ಕೂಡ ಕಳ್ಳತನ ಮಾಡಿದ್ದಾರೆ.
ಈ ಬಗ್ಗೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಐತಿಹಾಸಿಕ ದೇಗುಲ: ಈ ದೇಗುಲ ಐತಿಹಾಸಿಕ ದೇಗುಲವಾಗಿದ್ದು ನೂರಾರು ವರ್ಷಗಳ ಐತಿಹ್ಯವಿದೆ. ಪ್ರತಿ ವರ್ಷವೂ ಇಲ್ಲಿ ಒಂದು ತಿಂಗಳ ಕಾಲ ಗ್ರಾಮ ದೇವತೆಯ ಹಬ್ಬವನ್ನು ಆಚರಿಸಲಾಗುತ್ತದೆ. ಈ ಬಾರಿಯೂ ಹಬ್ಬ ನಡೆದ ನಂತರ ಹುಂಡಿುಂ ಹಣವನ್ನು ತೆಗೆದಿರಲಿಲ್ಲ. ಚಾಮುಂಡೇಶ್ವರಿ ಕೊಂಡೋತ್ಸವೂ ಕೂಡ ನಡೆುುಂತ್ತದೆ. ಕೊಂಡದ ರಾತ್ರಿ ಇಲ್ಲಿನ ದೇವಿಗೆ ಚಿನ್ನಾಭರಣಗಳನ್ನು ತೊಡಿಸಿ ದೇಗುಲದ ಬಾಗಿಲನ್ನೇ ಹಾಕುವುದಿಲ್ಲ. ಈ ಸಂದರ್ಭದಲ್ಲೂ ಕೂಡ ಇಲ್ಲಿ ಯಾವುದೇ ಕಳ್ಳತನ ನಡೆುದಿರುವುದಿಲ್ಲ. ಈಗ ನಡೆದಿರುವ ಕಳ್ಳತನ ಹಲವು ಅನುಮಾನಗಳಿಗೆ ಆಸ್ಪದ ನೀಡಿದೆ. ತನಿಖೆಯ ಬಳಿಕ ಇದಕ್ಕೆಲ್ಲಾ ಉತ್ತರ ದೊರೆಯಲಿದೆ.




