ಹನೂರು : ತಾಲೂಕಿನ ಶೆಟ್ಟಳ್ಳಿ ಗ್ರಾಮದಲ್ಲಿ ಒಕ್ಕಣೆ ಕಣದಲ್ಲಿ ಹಾಕಲಾಗಿದ್ದ ರಾಗಿ ಫಸಲಿಗೆ ಬೆಂಕಿ ಬಿದ್ದು ಸುಮಾರು 30 ಕ್ವಿಂಟಾಲ್ ರಾಗಿ ಫಸಲು ಬೆಂಕಿಗೆ ಆಹುತಿಯಾಗಿರುವ ಘಟನೆ ಜರುಗಿದೆ.
ಹನೂರು ತಾಲೂಕಿನ ಶೆಟ್ಟಳ್ಳಿ ಗ್ರಾಮದ ಮಂಜುನಾಥ್ ಮತ್ತು ಗುರುಸಿದ್ದ ಎಂಬುವವರು ಸುಮಾರು 5 ಏಕರೆಯಲ್ಲಿ ರಾಗಿ ಫಸಲನ್ನು ಬೆಳೆದಿದ್ದರು. ಹಲವು ದಿನಗಳಿಂದ ಕಟಾವು ಮಾಡಿ ಒಕ್ಕಣೆ ಮಾಡಲು ಸಂಗ್ರಣೆ ಮಾಡಲಾಗಿತ್ತು. ಆದರೆ ಬುಧವಾರ ಸಂಜೆ ದಿಡೀರ್ ಬೆಂಕಿ ತಗುಲಿ ಸಂಪೂರ್ಣ ನಾಶವಾಗಿದೆ.
ಈ ವೇಳೆ ರೈತರು ಮಾತನಾಡಿ ಸುಮಾರು ಐದು ಏಕರೆಯಲ್ಲಿ ಸುಮಾರು 30 ಕ್ವೀಂಟಾಲ್ ರಾಗಿಯನ್ನು ಸಾಲ ಮಾಡಿ ಕಷ್ಟ ಪಟ್ಟು ಬೆಳೆಯಲಾಗಿತ್ತು ಆದರೆ ಬುಧವಾರ ಬೆಂಕಿ ತಗುಲಿ ಭಸ್ಮವಾಗಿದೆ. ಯಾರೋ ಕಿಡೀಗೇಡಿಗಳು ಉದ್ದೇಶಪೂರ್ವಕವಾಗಿ ಬೆಂಕಿಯನ್ನು ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.




