Mysore
18
broken clouds

Social Media

ಮಂಗಳವಾರ, 14 ಜನವರಿ 2025
Light
Dark

ಪುಣಜನೂರು ಚೆಕ್‌ಪೋಸ್ಟ್ ನಲ್ಲಿ ಲಾರಿಗೆ ಸಿಲುಕಿ ಯುವಕ ಸಾವು

ಚಾಮರಾಜನಗರ : ತಮಿಳುನಾಡು ಕಡೆಗೆ ಕರಿಕಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿಯ ಚಕ್ರಕ್ಕೆ ಯುವಕ ಸಿಲುಕಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಪುಣಜನೂರು ಚೆಕ್‌ಪೊಸ್ಟ್ ಹತ್ತಿರ ನಡೆದಿದೆ.

ಪುಣಜನೂರು ಗ್ರಾಮದ ಲೇಟ್ ಕುಂಬೇಗೌಡನ ಮಗ ಕೋಣೋರೆಗೌಡ (40 ವರ್ಷ) ಮೃತ ದುರ್ದೈವಿಯಾಗಿದ್ದಾರೆ.

ಈತ ಪುಣಜನೂರು ಚೆಕ್‌ಪೋಸ್ಟ್ ಬಳಿ ನಿಂತಿದ್ದಾಗ ಚೆಕ್‌ಪೋಸ್ಟ್ ಬಳಿಗೆ ಕಪ್ಪು ಶಿಲೆಗಳನ್ನು ತುಂಬಿಕೊಂಡ ಬಂದ ಲಾರಿಯನ್ನು ಅರಣ್ಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿ ತಡೆದು ತಪಾಸಣೆ ಮಾಡಿದ್ದಾರೆ.

ಬಳಿಕ ಚಾಲಕ ಹೋಗುವ ಧಾವಂತದಲ್ಲಿ ಯುವಕ ನಿಂತಿರುವುದನ್ನು ನೋಡದೆ ಹೋಗಿರುವುದು ಅವಘಡಕ್ಕೆ ಕಾರಣ ಎನ್ನಲಾಗಿದೆ. ಲಾರಿಯ ಚಕ್ರಕ್ಕೆ ಸಿಲುಕಿದ ಯವಕನ ತಲೆ ಸಿಡಿದು ಚೆಲ್ಲಾಪಿಲ್ಲಿಯಾಗಿದೆ.

ತಕ್ಷಣ ಅಲ್ಲಿಯೇ ಇದ್ದ ಪೊಲೀಸರು ಲಾರಿಯನ್ನು ಜಪ್ತಿ ಮಾಡಿ ಪೊಲೀಸ್ ಠಾಣೆಗೆ ತಂದು ನಿಲ್ಲಿಸಿದ್ದಾರೆ.

ಯುವಕನ ಶವವನ್ನು ಚೀಲದಲ್ಲಿ ತುಂಬಿಕೊಂಡು ವೈದ್ಯಕೀಯ ಕಾಲೇಜು ಅಸ್ಪತ್ರೆಗೆ ರವಾನಿಸಲಾಗಿದೆ. ಮೃತಪಟ್ಟ ಯವಕನಿಗೆ ತಾಯಿ, ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ವಿಷಯ ತಿಳಿದು ಸ್ಥಳಗಕ್ಕಾಮಿಸಿದ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿತ್ತು.

Tags: