ಗುಂಡ್ಲುಪೇಟೆ: ಪಟ್ಟಣದ ಜೆಎಸ್‌ಎಸ್ ಕಾಲೇಜು ಎದುರಿನ ರಸ್ತೆಯಲ್ಲಿ ಪೈಪ್‌ಲೈನ್ ಗುಂಡಿ ತೆಗೆದು ಮಣ್ಣು ಮುಚ್ಚಿದ್ದರಿಂದ ಪೈಪ್‌ಲೈನ್ ಹೊಡೆದ ಕಾರಣ ಖಾಸಗಿ ಶಾಲಾ ವಾಹನದ ಚಕ್ರ ಗುಂಡಿಯಲ್ಲಿ ಹೂತು ಪಲ್ಟಿಯಾಗುವುದರಲ್ಲಿ ಸ್ವಲ್ಪದರಲ್ಲಿ ಪಾರಾಗಿದೆ.
ಪಟ್ಟಣದಲ್ಲಿ ಪೈಪ್ ಲೈನ್ ಗುಂಡಿ ತೆಗೆದು ಕಾಟಾಚಾರಕ್ಕೆ ಗುಂಡಿ ಮುಚ್ಚುವುದರಿಂದ ಇಂತಹ ಅನಾಹುತಗಳು ಸಂಭವಿಸುತ್ತಿವೆ. ವಾಹನಗಳು ಸಂಚರಿಸುವ ಮಾರ್ಗದಲ್ಲಿ ಗಟ್ಟಿಯಾದ ಮಣ್ಣು ಹಾಕಿ ಮಚ್ಚುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.