ಯಳಂದೂರು: ಬೀದಿ ನಾಯಿ ದಾಳಿಯಿಂದ ಮೇಕೆಯೊಂದು ಮೃತಪಟ್ಟಿರುವ ಘಟನೆ ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ಸೋಮವಾರ (ಮೇ.13) ರಂದು ನಡೆದಿದೆ.
ಮೇಕೆಗಳು ಸಂಜೆ ಮನೆ ಕಡೆಗೆ ವಾಪಸಾಗುವ ವೇಳೆ ನಾಯಿಗಳ ಗುಂಪು ದಾಳಿ ಮಾಡಿ ಮೇಕೆ ಮರಿಯನ್ನು ಕೊಂದಿವೆ. ಗ್ರಾಮದಲ್ಲಿ ಎಲ್ಲರೂ ಜೀವ ಭಯದಿಂದ ಸಂಚರಿಸಬೇಕಾದ ವಾತಾವರಣ ಸೃಷ್ಠಿಯಾಗಿದೆ ಎಂದು ಮೇಕೆ ಕಳೆದುಕೊಂಡ ಸಿದ್ದಮಾದಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
ಈಚೆಗೆ ಗ್ರಾಮದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿ ಮೀರಿದೆ. ಸಾಕಾಣೆದಾರರು ಇಲ್ಲದಿರುವಾಗ ಸಾಕು ಪ್ರಾಣಿಗಳನ್ನು ಕೊಲ್ಲುವುದು, ಪದೇ ಪದೇ ಜಾನುವಾರುಗಳ ಮೇಲೆ ದಾಳಿ ಮಾಡುವ ಕೆಲಸ ಆಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.