Mysore
22
haze

Social Media

ಗುರುವಾರ, 25 ಡಿಸೆಂಬರ್ 2025
Light
Dark

5 ಹುಲಿಗಳ ದರ್ಶನ : ಸೆರೆಗೆ ಆನೆಗಳ ನೆರವು ; ಗ್ರಾಮದಲ್ಲಿ ನಿಷೇಧಾಜ್ಞೆ

ಚಾಮರಾಜನಗರ : ಜಿಲ್ಲೆಯ ನಂಜೇದೇವನಪುರ ಗ್ರಾಮದ ಕಲ್ಲು ಕ್ವಾರಿಯೊಂದರಲ್ಲಿ 5 ಹುಲಿಗಳ ಇರುವಿಕೆ ಡ್ರೋಣ್‌ನಲ್ಲಿ ಸೆರೆಯಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.

ಹುಲಿ ಪತ್ತೆಯಾದ ಹಿನ್ನೆಲೆಯಲ್ಲಿ ಬಿಳಿಗಿರಿರಂಗನಾಥ ದೇವಾಲಯ ಹುಲಿ ಸಂರಕ್ಷಿತ ಪ್ರದೇಶದ ಚಾಮರಾಜನಗರ ಬಫರ್ ವಲಯ ಅಧಿಕಾರಿಗಳು ಕೂಂಬಿಂಗ್ ತೀವ್ರಗೊಳಿಸಿದ್ದಾರೆ.

ಎರಡು ಆನೆ ಆಗಮನ
ಕಾರ್ಯಾಚರಣೆಗಾಗಿ ಈಶ್ವರ ಹಾಗೂ ಲಕ್ಷ್ಮಣ ಆನೆಗಳನ್ನು ಕರೆತರಲಾಗಿದೆ. ಅರಿವಳಿಕೆ ತಜ್ಞರು, ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದಾರೆ.

ಇದನ್ನೂ ಓದಿ:-ಸಾರ್ವಜನಿಕರ ಅಹವಾಲು ಸ್ವೀಕಾರ : ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದ ಸಚಿವ ಮಹದೇವಪ್ಪ

ಕಾರ್ಯಾಚರಣೆಗಾಗಿ ಮೂರು ಊರಲ್ಲಿ ನಿಷೇಧಾಜ್ಞೆ
ನಂಜೇದೇವನಪುರ ಗ್ರಾಮದ ಕುಮಾರಸ್ವಾಮಿ ಎಂಬವರ ಜಮೀನಿನಲ್ಲಿ 5 ಹುಲಿ ಓಡಾಟ ಪತ್ತೆಯಾದ ಬಳಿಕ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಮೂಡಿತ್ತು. ಅಂತೆಯೇ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದು, ಎರಡು ದಿನ ಮೂರು ಗ್ರಾಮಗಳಲ್ಲಿ ನಿಷೇಧಾಜ್ಞೆ ಹೊರಡಿಸಿ ಚಾಮರಾಜನಗರ ತಹಸೀಲ್ದಾರ್ ಗಿರಿಜಾ ಆದೇಶಿಸಿದ್ದಾರೆ.

ನಂಜೆದೇವನಪುರ ಸೇರಿ ಉಡಿಗಾಲ, ವೀರನಪುರ ಗ್ರಾಮಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಡಿ.೨೨ ಹಾಗೂ ೨೩ರಂದು ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಕಾರ್ಯಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರೆಂದು ಕಟ್ಟೆಚ್ಚರ ವಹಿಸಲಾಗಿದ್ದು, ಯಾರೂ ಗುಂಪು ಸೇರದಂತೆ ಹಾಗೂ ಒಬ್ಬರೇ ಓಡಾಡದಂತೆ, ಕಾರ್ಯಾಚರಣೆ ವೇಳೆ ಜನರು ಮನೆಯಲ್ಲೇ ಇರುವಂತೆ ಆದೇಶಿಸಲಾಗಿದೆ.

Tags:
error: Content is protected !!