ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ ಕೋಟೆ ಅರಣ್ಯದಲ್ಲಿ ನಡೆದಿದೆ.
ಹಳೆಕೋಟೆ ನಿವಾಸಿ ಫ್ರಾನ್ಸಿಸ್ ಎಂಬುವವರಿಗೆ ಸೇರಿದ ಮೇಕೆಗಳು ಇವಾಗಿದ್ದು, ಎಂದಿನಂತೆ ಮೇಯಲು ಬಿಟ್ಟಿದ್ದಾಗ ಅವು ಅರಣ್ಯ ವ್ಯಾಪ್ತಿಗೆ ಸೇರಿದ ಹಳ್ಳವೊಂದರ ಬಳಿ ತೆರಳಿದ್ದವು. ಆದರೆ ಸಂಜೆ ಹೊತ್ತಿನಲ್ಲಿ 11 ಮೇಕೆಗಳು ಸಾವನ್ನಪ್ಪಿದ್ದವು.
ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಮೇಕೆ ಮರಿಗಳು ಸತ್ತು ಬಿದ್ದಿದ್ದ ಸ್ಥಳದಲ್ಲಿ ಯೂರಿಯಾ ಚೆಲ್ಲಿರುವ ರೀತಿಯಲ್ಲಿ ಕಂಡುಬಂದಿದೆ.
ಈ ಬಗ್ಗೆ ಮಾತನಾಡಿರುವ ಕೊಳ್ಳೇಗಾಲ ಬಫರ್ ವಲಯ ಆರ್‌ಎಫ್‌ಓ ರವಿಕುಮಾರ್, ಕಿಡಿಗೇಡಿಗಳು ಯೂರಿಯಾ ಮಿಶ್ರಿತ ನೀರನ್ನು ಕುಡಿದು ಮೇಕೆಗಳು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆಸಿ ವರದಿ ಬಂದ ಬಳಿಕ ಮೇಕೆಗಳ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು.





