ಚಾಮರಾಜನಗರ: ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ವೀರಶೈವ ಮಹಾಸಭಾ ನಿರ್ದೇಶಕ ಕಂಠಿಬಸವರಾಜು ಹಾಗೂ ಕೊಯಮತ್ತೂರು ಅರವಿಂದ ಆಸ್ಪತ್ರೆ ವತಿಯಿಂದ ಅ.19ರಂದು ನಗರದ ವರ್ತಕರ ಭವನದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಅ. 19ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರ ವರಗೆ ಶಿಬಿರ ನಡೆಯಲಿದ್ದು ಕಣ್ಣಿನಪೊರೆ, ಹತ್ತಿರ ಮತ್ತು ದೂರದೃಷ್ಠಿ ದೋಷ, ಕಣ್ಣಿನಲ್ಲಿ ಬಿರುಕು, ವಾರೆಕಣ್ಣು, ರಾತ್ರಿ ಕುರುಡುತನ, ಗ್ಲಾಕೋಮ, ನೀರು ಸೋರುವಿಕೆ ಪರೀಕ್ಷಿಸಲಾಗುವುದು. ಶಿಬಿರಕ್ಕೆ ಬರುವವರು ಮಾಸ್ಕ್ ಧರಿಸಿರಬೇಕು. ಆಧಾರ್ ಜೆರಾಕ್ಸ್ ಹಾಗೂ ಮೊಬೈಲ್ ಸಂಖ್ಯೆ ತರಬೇಕು. ಹತ್ತಿರ ದೃಷ್ಠಿ, ದೂರದೃಷ್ಠಿವುಳ್ಳವರಿಗೆ ಕನ್ನಡಕಗಳನ್ನು ರಿಯಾಯಿತಿ ದರದಲ್ಲಿ ಕೊಡಲಾಗುವುದು ಎಂದು ಕಂಠಿ ಬಸವರಾಜು ಹಾಗೂ ಮುತ್ತಿಗೆದೊರೆ ತಿಳಿಸಿದ್ದಾರೆ.