ಚಾಮರಾಜನಗರ: ರಾತ್ರಿಯಿಡೀ ಸುರಿದ ಧಾರಾಕಾರ ಮಳೆಯಿಂದಾಗಿ ಜ್ಯೋತಿ ಗೌಡನಪುರ ಗ್ರಾಮ ಮತ್ತೊಮ್ಮೆ ಜಲಾವೃತವಾಗಿದ್ದು ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ.
ತಾಲ್ಲೂಕಿನ ಜ್ಯೋತಿ ಗೌಡನಪುರ ಗ್ರಾಮದಲ್ಲಿ ಈ ಮೊದಲು ಮಳೆಯಿಂದಾಗಿ ನೂರಾರು ಮನೆಗಳಿಗೆ ನೀರು ಬಹುದೊಡ್ಡ ಅವಾಂತರವನ್ನೇ ಸೃಷ್ಟಿ ಮಾಡಿತ್ತು. ಭಾನುವಾರ ರಾತ್ರಿ ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗಿದ್ದು ಗ್ರಾಮದ ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ರಾತ್ರಿಯಿಡೀ ಸಂಕಷ್ಟ ಅನುಭವಿಸುವಂತಾಯಿತು.
ಅದಲ್ಲದೇ ತಾಲ್ಲೂಕಿನ ಹೆಬ್ಬಸೂರು, ನಾಗವಳ್ಳಿ, ಬಸಪ್ಪನ ಪಾಳ್ಯ ಹಾಗೂ ಇನ್ನಿತರೆ ಗ್ರಾಮಳಲ್ಲಿ ಮಳೆಯಿಂದ ಅನೇಕ ಹಾನಿ ಸಂಭವಿಸಿದೆ.