ಹನೂರು : ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಬಾರಿ ಮಳೆಯಿಂದಾಗಿ ಗೋಡೆ ಕುಸಿದು ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಘಟನೆ ನಾಗಮಲೆ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ವಿವಿಧ ಗ್ರಾಮಗಳಲ್ಲಿ ಶುಕ್ರವಾರ ಬೆಳಿಗ್ಗೆಯಿಂದಲೂ ನಿರಂತರವಾಗಿ ಮಳೆ ಬೀಳುತ್ತಿರುವ ಪರಿಣಾಮ ಮಲೆ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗಮಲೆ ಗ್ರಾಮದಲ್ಲಿ ಗೋಡೆ ಕುಸಿದು ಪ್ರಾಣಾಪಾಯದಿಂದ ಪಾರಾದ ಘಟನೆ ಜರುಗಿದೆ..
ಪುಟ್ಟಮ್ಮ ಬಿನ್ ಜಡೆ ಮಾದಯ್ಯ ಎಂಬುವವರ ಮನೆ ಗೋಡೆ ಕುಸಿದಿದ್ದು ಸಂಪೂರ್ಣವಾಗಿ ಇಂದೊ ನಾಳೆಯೋ ಬೀಳುತ್ತದೆ ಆ ಹಂತದಲ್ಲಿ ಗೋಡೆಗಳಿದೆ.
ಪರಿಹಾರಕ್ಕಾಗಿ ಮನವಿ : ತೀರಾ ಬಡತನ ಹೊಂದಿರುವ ಕುಟುಂಬ ಇದೀಗ ಮನೆ ಗೋಡೆ ಕುಸಿದು ಕಂಗಲಾಗಿದ್ದು, ಪರಿಹಾರ ನೀಡುವ ಮೂಲಕ ಸಹಾಯಸ್ತ ಚಾಚಬೇಕು ಎಂದು ಪುಟ್ಟಮ್ಮ ಒತ್ತಾಯ ಮಾಡಿದ್ದಾರೆ.
ಜಿಟಿ ಜಿಟಿ ಮಳೆ : ಶುಕ್ರವಾರ ಬೆಳಿಗ್ಗೆ ಸುಮಾರಿಗೆ ಪ್ರಾರಂಭವಾದ ಮಳೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರ ಜೀವನ ಅಸ್ತ ವ್ಯಸ್ತ್ಯವಾಗಿದೆ.ಅಲ್ಲದೆ ಒಂದೇ ಸಮನೆ ಸುರಿಯುತ್ತಿರುವ ಪರಿಣಾಮ ಜನರ ಓಡಾಟ ಸಹ ಕಡಿಮೆಯಾಗಿತ್ತು. ಅಲ್ಲದೆ ಕೆಶಿಪ್ ರಸ್ತೆ ಸಂಪೂರ್ಣ ಕೆಸರು ಗದ್ದೆಯಾಗಿ ರುವುದರಿಂದ ವಾಹನ ಸವಾರರು ಸಂಚರಿಸಲು ತೀವ್ರ ಹರಸಾಹಸ ಪಡಬೇಕಾಗಿದೆ.