ಚಾಮರಾಜನಗರ: ಜಿಲ್ಲೆಯಾದ್ಯಂತ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಸುವರ್ಣಾವತಿ ನದಿ ಉಕ್ಕಿ ಹರಿಯುತ್ತಿದ್ದು ಹಲವಾರು ಗ್ರಾಮಗಳು ಮುಳುಗಡೆಯಾಗಿದ್ದು ಹಾಸ್ಟೆಲ್ ಹಾಗೂ ಮನೆಗಳು ಜಲಾವೃತವಾಗಿದೆ.
ಯಳಂದೂರು ನಗರದಲ್ಲಿರುವ ಸಮಾಜ ಕಲ್ಯಾಣ ಇಲಾಖೆ ವಿದ್ಯಾರ್ಥಿ ನಿಲಯ ಬೆಳಗಿನ ಜಾವ ಮುಳುಗಡೆಯಾಗಿದ್ದು ವಿದ್ಯಾರ್ಥಿಗಳು ಪರದಾಡುವಂತಾಯಿತು, ಪಕ್ಕದಲ್ಲಿರುವ ಕೆಇಬಿ ಕಛೇರಿ ಕೂಡ ಭಾಗಶಃ ಮುಳುಗಡೆಯಾಗಿದ್ದು ನೂರಾರು ಮನೆಗಳಿಗೆ ನೀರು ನುಗ್ಗಿ ಸಾರ್ವಜನಿಕರ ಬದುಕು ಅತಂತ್ರವಾಗಿದೆ.