ಚಾಮರಾಜನಗರ: ಕಳೆದ 3-4 ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳಿಗೆ ಮಳೆಯ ನಡುವೆಯೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಚಾ.ನಗರ ತಾಲ್ಲೂಕಿನ ಹೆಬ್ಬಸೂರು ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ ರೈತ ಮುಖಂಡ ಹೆಬ್ಬಸೂರು ಬಸವಣ್ಣ ಅವರ ಬಳಿ ಕೆಲವು ಸಮಯ ಚರ್ಚೆ ನಡೆಸಿದರು. ನಂತರ ಸುವರ್ಣಾವತಿ ನದಿ ನೀರಿನ ಪ್ರವಾಹದಿಂದಾಗಿ ಸಾಕಷ್ಟು ಪ್ರಮಾಣದಲ್ಲಿ ತೆಂಗಿನಕಾಯಿಗಳು ಕೊಚ್ಚಿ ಹೋಗಿ ಸಂಕಷ್ಟಕ್ಕೆ ಹೀಡಾಗಿದ್ದ ರೈತ ಮರಿಸ್ವಾಮಿ ಅವರ ತೋಟದ ಮನೆಗೆ ಭೇಟಿ ನೀಡಿ ರಾಜೇಶ್ವರಿ ಹಾಗೂ ಅವರ ಮಗ ಕಮಲೇಶ್ ಅವರ ಜೊತೆಗೆ ಹಾನಿಯಾಗಿರುವ ಕುರಿತು ಚರ್ಚಿಸಿ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಅದೇ ಗ್ರಾಮದ ರೈತ ಹೊನ್ನಪ್ಪ ಅವರು ತನ್ನ ಜಮೀನು ಹೊಳೆಯ ತೀರದಲ್ಲಿದ್ದು ತಡೆಗೋಡೆ ನಿರ್ಮಾಣ ಮಾಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದರು ಅಧಿಕಾರಿಗಳು ಯಾವುದೇ ಕ್ರಮ ವಹಿಸಿಲ್ಲ ಇದರಿಂದ ಅರ್ಧ ಎಕರೆಯಷ್ಟು ಅಡಿಕೆ ತೋಟ ನಾಶವಾಗಿದೆ ಎಂದು ತಿಳಿಸಿದರು ಸಚಿವರು ಅಧಿಕಾರಿಗಳಿಗೆ ಕೂಡಲೇ ಕ್ರಮ ವಹಿಸುವಂತೆ ಸೂಚಿಸಿದರು.