Light
Dark

ಚಾ.ನಗರದಲ್ಲಿ ಒಬ್ಬನೇ ಒಬ್ಬ ಪುನೀತ್ ರಾಜ್ ಕುಮಾರ್ ಜೊತೆಗಿನ ಗಣಪ

ಚಾಮರಾಜನಗರ  : ನಗರದಲ್ಲಿ ಡಾ.ಪುನೀತ್ ರಾಜ್ ಕುಮಾರ್ ಅವರು ಜೊತೆಗಿರುವ ಗಣೇಶನ ಮೂರ್ತಿ ಒಂದೇ ಒಂದು ಲಭ್ಯವಿದ್ದು ಸಾಕಷ್ಟು ಯುವಕರು ಹಾಗೂ ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಬಳಿ ಗಣಪತಿ ಮಾರಾಟಕ್ಕಾಗಿ ಹಾಕಿರುವ ಸ್ಟಾಲ್ ನಲ್ಲಿ ವಿವಿಧ ಭಂಗಿಯ ಮಣ್ಣಿನ ಗಣೇಶನ ಮೂರ್ತಿಗಳ ಮಾರಾಟ ಜೋರಾಗಿದ್ದು ಗಣೇಶನ ಜೊತೆಗೆ ಇರುವ ಡಾ.ಪುನೀತ್ ರಾಜ್ ಕುಮಾರ್ ಅವರ ಮೂರ್ತಿ ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಸುಮಾರು ೧೧-೧೨ ಸಾವಿರ ರೂಪಾಯಿ ಬೆಲೆಬಾಳುವ ಮೂರ್ತಿಗೆ ಬೇಡಿಕೆ ಹೆಚ್ಚಾಗಿದ್ದು ಸದ್ಯಕ್ಕೆ ಒಂದು ಮಾತ್ರ ಲಭ್ಯವಿದ್ದು ಮಾರಾಟವಾದರೆ ಇಂದು ಸಂಜೆಯೊತ್ತಿಗೆ ಇನ್ನಷ್ಟು ತರಿಸುವ ಯೋಜನೆ ಮಾಡಲಾಗುವುದು ಎಂದು ಮಾರಾಟಗಾರರಾದ ವಿನಯ್ ಕುಮಾರ್ ಅವರು ಆಂದೋಲನಕ್ಕೆ ಮಾಹಿತಿ ನೀಡಿದರು.

ಸೋಮವಾರ ಬೆಳಿಗ್ಗೆ ಸುರಿದ ಭಾರಿ ಮಳೆಯಿಂದಾಗಿ ಚೂರು ವ್ಯಾಪಾರಕ್ಕೆ ತೊಡಕು ಉಂಟಾಯಿತು, ಪುನೀತ್ ಜೊತೆಯಾಗಿರುವ ಗಣೇಶನ ಮೂರ್ತಿಗೆ ಬೇಡಿಕೆ ಹೆಚ್ಚಾಗಿದ್ದು ಮಾರಾಟವಾದ ನಂತರ ಮತ್ತಷ್ಟು ತರಿಸುತ್ತೇವೆ  ಎಂದು ಮಾರಾಟಗಾರ ವಿನಯ್ ಕುಮಾರ್ ತಿಳಿಸಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ