Mysore
27
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಚಾ.ನಗರ : ಬಿಳಿಗಿರಿ ಬನದಲ್ಲಿ ಕುಬ್ಜ ಹಲ್ಲಿಗಳು ಪತ್ತೆ

ಚಾಮರಾಜನಗರ : ಬಿಳಿಗಿರಿರಂಗನನಾಥ ಸ್ವಾಮಿ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕುಬ್ಜ ಹಲ್ಲಿಗಳು ಪತ್ತೆಯಾಗಿವೆ. ಪತ್ತೆಯಾದ ಹಲ್ಲಿಯು 2.57 CM ನಷ್ಟು ಉದ್ದವಿದ್ದು, ಗಂಡು ಹಲ್ಲಿಯ ದೇಹ ಕಂದು ಬಣ್ಣದಿಂದಿದ್ದು ಬಾಲ ಕಪ್ಪಾಗಿದೆ. ಪೂರ್ವ ಮತ್ತು ಪಶ್ಚಿಮ ಘಟ್ಟಗಳ ಸೇತುವಾದ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನನಾಥ ಸ್ವಾಮಿ ದೇವಾಲಯದ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೊಸ ಹಲ್ಲಿ ಪ್ರಭೇದವನ್ನು ಪತ್ತೆ ಹಚ್ಚಲಾಗಿದೆ.
ಬಿಳಿಗಿರಿರಂಗ ಬೆಟ್ಟದಲ್ಲಿರುವ ಏಟ್ರೀ (ಅಶೋಕ ಟ್ರಸ್ಟ್ ಫಾರ್ ರಿಸರ್ಚ್ ಇನ್ ಇಕಾಲಜಿ ಅಂಡ್ ದಿ ಎನ್ವಿರಾನ್ಮೆಂಟ್) ಸಂಶೋಧಕ ಡಾ. ಎನ್.ಎ.ಅರವಿಂದ್ ಮತ್ತು ಸಂಶೋಧನಾ ವಿದ್ಯಾರ್ಥಿ ಸೂರ್ಯನಾರಾಯಣನ್ ಈ ಹೊಸ ಹಲ್ಲಿ ಪ್ರಭೇದ ಪತ್ತೆ ಹಚ್ಚಿದ್ದಾರೆ‌. ಅಧ್ಯಯನ ನಡೆಸಿ ಅದನ್ನು ‘ಕುಬ್ಜ ಹಲ್ಲಿ’ ಎಂದು ಗುರುತಿಸಿದ್ದಾರೆ.
ಪತ್ತೆಯಾದ ಹಲ್ಲಿಯು 2.57 CM ನಷ್ಟು ಉದ್ದವಿದ್ದು, ಗಂಡು ಹಲ್ಲಿಯ ದೇಹ ಕಂದು ಬಣ್ಣದಿಂದಿದ್ದು ಬಾಲ ಕಪ್ಪಾಗಿದೆ. ಹೆಣ್ಣು ಹಲ್ಲಿಯು ಪೂರ್ತಿಯಾಗಿ ಕಂದು ಬಣ್ಣದಿಂದ ಕೂಡಿದೆ. ನಿವೃತ್ತ ಪ್ರಾಧ್ಯಾಪಕರಾದ ಡಾ.ಉಮಾಶಂಕರ್ ಅವರ ಹೆಸರನ್ನು ಹಲ್ಲಿ ಪ್ರಬೇಧಕ್ಕೆ ಸೇರಿಸಿದ್ದು, ಉಮಾಶಂಕರ್ ಕುಬ್ಜ ಹಲ್ಲಿ (Umashankar’s dwarf gecko) ಎಂದು ಕರೆಯಲಾಗಿದೆ.
ಇನ್ನು ಹೊಸದಾಗಿ ಪತ್ತೆಯಾಗಿರುವ ಪ್ರಬೇಧವು ರಾತ್ರಿ ಹೊತ್ತು ಹೆಚ್ಚು ಕಾಣಲಿದ್ದು ಕಲ್ಲು, ಬಂಡೆಗಳ ಸಂದಿಗಳು ಇವುಗಳ ಅವಾಸಸ್ಥಾನ ಆಗಲಿದೆ. ಎರಡಕ್ಕಿಂತ ಹೆಚ್ಚು ಹಲ್ಲಿಗಳು ಒಂದೇ ಕಡೆ ಮೊಟ್ಟೆ ಇಡಲಿದ್ದು, ಈ ಹಲ್ಲಿಯೂ ಕುಬ್ಜ ಗಾತ್ರದ್ದಾಗಿದೆ, ಬಿಳಿಗಿರಿಬನದಲ್ಲಿ ಮಾತ್ರ ಈ ಹಲ್ಲಿ ಕಂಡುಬರಲಿದೆ ಎಂದು ಅಧ್ಯಯನದಿಂದ ಸ್ಪಷ್ಟವಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!