Mysore
29
overcast clouds

Social Media

ಗುರುವಾರ, 30 ಜುಲೈ 2026
Light
Dark

ಕಾರಿಗೆ ಹಿಂಬದಿಯಿಂದ ಮತ್ತೊಂದು ಕಾರು ಡಿಕ್ಕಿ; ವ್ಯಕ್ತಿಗೆ ಗಾಯ

ಗುಂಡ್ಲುಪೇಟೆ :ಕಾರೊಂದಕ್ಕೆ ಮತ್ತೊಂದು ಕಾರು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದಿರುವ ಘಟನೆ  ತಾಲೂಕಿನ ಬೇಗೂರು ಗ್ರಾಮದ ಪಿಯು ಕಾಲೇಜು ಬಳಿ ನಡೆದಿದೆ.

ಎರಡು ಕಾರುಗಳು ಮೈಸೂರು ಕಡೆಯಿಂದ ಬರುತ್ತಿದ್ದವು, ವೇಗವಾಗಿ ಬಂದ ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದ್ದು ಒಂದು ಕಾರಿನ ಚಾಲಕನಿಗೆ ಗಾಯಗಳಾಗಿದೆ.

ಇನ್ನು, ಡಿಕ್ಕಿ ರಭಸಕ್ಕೆ ಎರಡೂ ಕಾರುಗಳು ರಸ್ತೆಯಿಂದ ಕೆಳಕ್ಕಿಳಿದು ಅವಾಂತರ ಸೃಷ್ಟಿಸಿದ್ದು ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!