Mysore
20
overcast clouds

Social Media

ಭಾನುವಾರ, 19 ಜನವರಿ 2025
Light
Dark

ವಿಶೇಷಚೇತನ ಮಕ್ಕಳು ದೇವರ ಸಮಾನ : ಸಿ.ಚಂದನ್ ಗೌಡ

ಮೈಸೂರು: ವಿವಿಧ ಸೇವಾ ಕಾರ್ಯಗಳ ಮೂಲಕ ಸರಳವಾಗಿ ಕರ್ನಾಟಕ ರಾಜ್ಯ ರೈತ ಕಲ್ಯಾಣ ಸಂಘದ ರಾಜ್ಯಾಧ್ಯಕ್ಷ ಸಿ.ಚಂದನ್ ಗೌಡ ಅವರ ಜನುಮ ದಿನವನ್ನು ಆಚರಿಸಲಾಯಿತು.
ಸೋಮವಾರ ಬೆಳಗ್ಗೆ ಇಲ್ಲಿನ ತಿಲಕ್ ನಗರದಲ್ಲಿರುವ ವಿಶೇಷಚೇತನ ಸರ್ಕಾರಿ ಶಾಲಾ ಮಕ್ಕಳಿಗೆ ಬೆಳಗ್ಗಿನ ಉಪಹಾರದ ಜೊತೆಗೆ ದಿನಬಳಕೆಗೆ ಅಗತ್ಯವಿರುವ ವಿವಿಧ ಪದಾರ್ಥಗಳು ಸೇರಿದಂತೆ ಔಷಧಗಳುಳ್ಳ ಮೆಡಿಕಲ್ ಕಿಟ್ ಅನ್ನು ಚಂದನ್ ಗೌಡರು ವಿತರಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿಶೇಷಚೇತನ ಮಕ್ಕಳು ದೇವರ ಸಮಾನ.ಇಂದು ಅವರುಗಳ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ಕ್ಷಣವಾಗಿದೆ. ಇಂದಿನ ದಿನ ನನ್ನ ಜೀವನದಲ್ಲಿ ಅವಿಸ್ಮರಣೀಯ ಎಂದರು.
ರೈತ ಕಲ್ಯಾಣ ಸಂಘದ ವತಿಯಿಂದ ಸೇವಾ ಕಾರ್ಯಗಳು ಮುಂದುವರೆಯಲಿದ್ದು, ಈ ಸರ್ಕಾರಿ ಶಾಲೆಗೆ ಅಗತ್ಯವಿರುವ ನೆರವು ನೀಡಲಾಗುವುದು ಹಾಗೂ ಇಲ್ಲಿನ ಮಕ್ಕಳ ಶಿಕ್ಷಣ ಮತ್ತು ಇನ್ನಿತರೆ ಸೌಲಭ್ಯಗಳನ್ನು ಒದಗಿಸುವುದಾಗಿ ಇದೇ ವೇಳೆ ನೀಡಿದರು.
ಬಳಿಕ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಸೇರಿದಂತೆ ಇನ್ನಿತರ ಸೇವಾ ಕಾರ್ಯಗಳಲ್ಲಿ ಅವರು ಪಾಲ್ಗೊಂಡರು.
ಶಾಲೆಯ ವ್ಯವಸ್ಥಾಪಕರಾದ ಸತೀಶ್, ಹೇಮಂತ್ ಗೌಡ, ಅಭಿ,ಸಂಜಯ್,ವೇಣು,ವಿದ್ಯಾ,ರಾಜು,ಹರೀಶ್ ಗೌಡ, ಚಂದ್ರು, ಮೂರ್ತಿ, ನವೀನ್ ಗೌಡ, ಮೋಸಿನ್, ಈರಣ್ಣ, ದಾಸೇಗೌಡ, ಸಿದ್ದಲಿಂಗು, ವಸಂತ, ನಾಗರಾಜು, ನಾಗೇಶ್, ಪುನೀತ್, ಬೇಬಿ, ಅಜ್ಗರ್, ಶಿವಶಂಕರ, ಚಂದ್ರು, ಲೋಕಿ ಚನ್ನಮಾದನಾಯಕ, ರಘು, ಶಿವು,ಸುರೇಶ್, ಮೃತ್ಯುಂಜಯ,
ಮಹೇಶ್, ಮಂಜುನಾಥ್, ಮಹದೇವು, ಶೇಖರ್, ಕುಮಾರ್, ಪುಟ್ಟರಾಜು, ಮಂಜು, ನಂಜುಂಡಸ್ವಾಮಿ, ಸದಾನಂದ್,ಲೋಕೇಶ್, ರಾಜೇಶ ಮತ್ತಿತರರು ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ