ಚಿನ್ನಾಭರಣ, ಮೂರು ಕಾರುಗಳ ವಶ; ಭಾಗಿಯಾದವರ ಬಂಧನಕ್ಕೂ ಕ್ರಮ
ಕುಶಾಲನಗರ: ಕುಶಾಲನಗರ ಠಾಣೆ ಪೊಲೀಸರು ಮೂವರು ಮನೆಗಳ್ಳರನ್ನು ಬಂಧಿಸಿದ್ದು, ಆರೋಪಿಗಳಿಂದ 12 ಲಕ್ಷ ರೂ. ಮೌಲ್ಯದ 190 ಗ್ರಾಂ ಚಿನ್ನಾಭರಣ ಮತ್ತು ಮೂರು ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.
ಮಡಿಕೇರಿ ತಾಲ್ಲೂಕಿನ ನಾಪೋಕ್ಲು ಗ್ರಾಮದ ಎಂ.ಪಿ.ಖಾದರ್ ಎಂಬವರ ಪುತ್ರ ಎಂ.ಎ.ಇಬ್ರಾಹಿಂ(27), ನಾಪೋಕ್ಲು ಸಮೀಪದ ಕೊಕೇರಿ ಗ್ರಾಮದ ಸುರೇಶ್ ಎಂಬುವರ ಪುತ್ರ ಸುದೀಪ್(21) ಮತ್ತು ಮಡಿಕೇರಿಯ ಅಜಾದ್ ನಗರದ ಎಂ.ಎಂ.ಮೊಹಮ್ಮದ್ ಅವರ ಪುತ್ರ ಎಂ.ಎಂ.ವಾಸಿಂ(29) ಬಂಧಿತ ಆರೋಪಿಗಳು. ಕಳ್ಳತನದಲ್ಲಿ ಭಾಗಿಯಾಗಿದ್ದ ಇನ್ನೂ ಮೂವರನ್ನು ಬಂಧಿಸಬೇಕಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕಳ್ಳತನದ ಹಣದಿಂದ ಖರೀದಿಸಿದ ಬಲೆನೋ ಕಾರು(ಕೆಎ 01 ಬಿಎಸ್‌ಎಸ್ 7724), ಮಾರುತಿ 800(ಕೆಎ 40 ಎಂ 418) ವಶಪಡಿಸಿಕೊಳ್ಳಲಾಗಿದೆ. ಇವರ ಬಂಧನದಿಂದ ಕುಶಾಲನಗರ ವ್ಯಾಪ್ತಿಯ 2, ನಾಪೋಕ್ಲು ವ್ಯಾಪ್ತಿಯ 2, ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ 1 ಪ್ರಕರಣ ಭೇದಿಸಲಾಗಿದೆ.
ಸಹಾಯಕ ಎಸ್‌ಪಿ ಕೆ.ಎಸ್.ಸುಂದರರಾಜು, ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್ ಮತ್ತು ಜಿ.ಎನ್.ಶ್ರೀಕಾಂತ ಮಾರ್ಗದರ್ಶನದಲ್ಲಿ ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿ ಚಂದ್ರಶೇಖರ್ ನೇತೃತ್ವದಲ್ಲಿ ಪಿಎಸ್‌ಐಗಳಾದ ಅಪ್ಪಾಜಿ, ಭಾರತಿ, ಶ್ರೀಧರ್, ಲೋಹಿತ್, ಎಎಸ್‌ಐ ವೆಂಕಟೇಶ್, ಗೋಪಾಲ್, ಗಣಪತಿ, ಪೇದೆಗಳಾದ ಸತೀಶ್, ಮಂಜುನಾಥ್, ದಯಾನಂದ, ನಾಗರಾಜ್, ಸುಧೀಶ್ ಕುಮಾರ್, ಪ್ರಕಾಶ್, ಪ್ರವೀಣ್, ಸಂದೇಶ್, ದಿವೇಶ್, ರಂಜಿತ್, ಗಣೇಶ್, ಸಹನಾ, ಶರ್ಮಿಳಾ, ಸಿಡಿಆರ್ ಘಟಕದ ರಾಜೇಶ್, ಗಿರೀಶ್, ಪ್ರವೀಣ್, ಚಾಲಕರಾದ ರಾಜು, ಅರುಣ್, ಯೋಗೀಶ್ ಮತ್ತು ಶೇಷಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.