Mysore
24
overcast clouds

Social Media

ಭಾನುವಾರ, 05 ಜುಲೈ 2026
Light
Dark

ವಾಹನ ಸಾಲ ಮಂಜೂರಾತಿಗೆ ಲಂಚದ ಬೇಡಿಕೆ: ಸಿಬ್ಬಂದಿ ಲೋಕಾಯುಕ್ತ ಬಲೆಗೆ

ಮಡಿಕೇರಿ : ಮಡಿಕೇರಿಯಲ್ಲಿರುವ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಕಚೇರಿಯ ಎಫ್‍ಡಿಎ ಸಾರ್ವಜನಿಕರೊಬ್ಬರಿಂದ ಲಂಚ ಪಡೆಯುವ ವೇಳೆ ದಾಳಿಯಾಗಿದೆ. ಎಫ್‍ಡಿಎ ಲತಾ ಎಂಬವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಸೋಮವಾರಪೇಟೆಯ ಲತೀಫ್ ಎಂಬವರು ಸಬ್ಸಿಡಿಯಲ್ಲಿ ಕಾರು ಕೊಳ್ಳಲು ಅರ್ಜಿ ಸಲ್ಲಿಸಿದ್ದರು. ಈ ವಿಚಾರವಾಗಿ 10% ಲಂಚದ ರೂಪದಲ್ಲಿ 20 ಸಾವಿ ರೂ.ಅನ್ನು ಎಫ್‍ಡಿಎ ಕೇಳಿದ್ದರು ಎನ್ನಲಾಗಿದೆ. ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು, ಇಂದು ಹತ್ತು ಸಾವಿರ ರೂ. ಪಡೆದುಕೊಳ್ಳುವ ಸಂದರ್ಭ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!