ಹುಣಸೂರು : ಕಳೆದ ಮೂರು ನಾಲ್ಕು ದಿನಗಳಿಂದ ಬೆಂಬಿಡದೆ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲ್ಲೂಕಿನ ಬನ್ನಿಕುಪ್ಪೆಯ ಬನಂತಮ್ಮ ಕೆರೆ ಸಂಪೂರ್ಣ ಭರ್ತಿಯಾಗಿ ಕೋಡಿ ಬಿದ್ದಿದೆ.

ಪರಿಣಾಮ ಅಕ್ಕಪಕ್ಕದಲ್ಲಿದ್ದ ಮನೆಗಳಿಗೆ ನೀರು ನುಗ್ಗಿದ್ದು ಸಾಕಷ್ಟು ಹಾನಿಯನ್ನು ಉಂಟು ಮಾಡಿದೆ.

ಈ ಭಾಗದಲ್ಲಿ ವಾಸಿಸುವ ಹಲವಾರು ಜನರು ರೈತಾಪಿ ವರ್ಗದವರೇ ಆಗಿದ್ದು ಕೋಡಿ ಬಿದ್ದ ನೀರು ಜಮೀನು ಗಿಡ ಪರಿಣಾಮ ಅಪಾರ ಪ್ರಮಾಣದ ಬೆಳೆ ನೀರಿಗೆ ಕೊಚ್ಚಿ ಹೋಗಿದೆ.

ಕಳೆದ ಎರಡು ವರ್ಷಗಳ ಹಿಂದೆಯೂ ಕೂಡ ಇದೇ ಕೆರೆಯು ಕೋಡಿ ಬಿದ್ದಿದ್ದು ಸುತ್ತಮುತ್ತಲಿನ ಏಳು ಹಳ್ಳಿಯವರು ಸೇರಿ ಬಾಗಿನ ಅರ್ಪಿಸಿದ್ದರು. ಅದಾದ ಬಳಿಕ ಈ ಬಾರಿ ಸತತ ಮಳೆಯಿಂದಾಗಿ ಕೆರೆ ಕೋಡಿ ಬಿದ್ದಿದೆ.






