Mysore
22
overcast clouds

Social Media

ಭಾನುವಾರ, 05 ಜುಲೈ 2026
Light
Dark

ಬಹುರೂಪಿಯಲ್ಲೂ ಪ್ರದರ್ಶನಗೊಳ್ಳಲಿದೆ ‘ಟಿಪ್ಪು ನಿಜಕನಸು’

ವಾರ್ಷಿಕ ರಂಗೋತ್ಸವಕ್ಕೆ ರಂಗಾಯಣ ಸಜ್ಜು, ಉದ್ಘಾಟನೆಗೆ ಪರೇಶ್‌ ರಾವಲ್‌

ಭಾರತೀಯತೆʼಯಡಿ ಏಳು ರಾಜ್ಯಗಳ ಏಳು ಭಾಷೆಗಳ 20 ನಾಟಕಗಳ ಪ್ರದರ್ಶನ

ಮೈಸೂರು: ರಂಗಾಯಣ ಮತ್ತೆ ಬಹುರೂಪಿ ರಾಷ್ಟ್ರೀಯ ರಂಗೋತ್ಸವಕ್ಕೆ ಸಜ್ಜಾಗಿದೆ. ಡಿಸೆಂಬರ್‌ ಎಂಟರಿಂದ 15ರವರೆಗೆ ಒಂದು ವಾರ ಕಾಲ ರಂಗಾಯಣದಲ್ಲಿ ಏಳು ರಾಜ್ಯಗಳ ಏಳು ಭಾಷೆಗಳ ಒಟ್ಟು 20 ನಾಟಕಗಳು ಪ್ರದರ್ಶನಗೊಳ್ಳಲಿವೆ. ನಾಟಕದ ಉದ್ಘಾಟನೆಗೆ ದಿಲ್ಲಿ ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷ, ಖ್ಯಾತ ನಟ ಪರೇಶ್‌ ರಾವಲ್‌ ಆಗಮಿಸುತ್ತಿರುವುದು ಈ ವಿಶೇಷ.

ಈ ಬಾರಿಯ ರಂಗೋತ್ಸವಕ್ಕೆ “ಭಾರತೀಯತೆʼ ಎಂದು ಶೀರ್ಷಿಕೆ ನೀಡಲಾಗಿದೆ. ಇವುಗಳಲ್ಲಿ 12 ಕನ್ನಡ ನಾಟಕಗಳು, ಒಂದು ತುಳು, ಒಂದು ಸಂಸ್ಕ್ರತ ನಾಟಕ ಸೇರಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾಹಿತಿ ನೀಡಿದರು.
ಬಹುರೂಪಿಯಲ್ಲಿ ಪ್ರದರ್ಶನಗೊಳ್ಳಲಿರುವ ನಾಟಕಗಳ ವಿವರ

 

  • ಡಿಸೆಂಬರ್‌ 9 ರಂದು ಭೂಮಿಗೀತದಲ್ಲಿ ಅಡ್ಡಂಡ ಕಾರ್ಯಪ್ಪ ನಿರ್ದೇಶನದ ಟಿಪ್ಪು ನಿಜಕನಸುಗಳು(ಕನ್ನಡ). ಸಮಯ: ಸಂಜೆ 3.30
  • ಡಿಸೆಂಬರ್‌ 10 ರಂದು ಭೂಮಿಗೀತದಲ್ಲಿ ಕೆ.ಎನ್.ಫಣಿಕ್ಕರ್ ನಿರ್ದೇಶನದ ಕರ್ಣಭಾರಂ( ಸಂಸ್ಕ್ರತ). ಸಮಯ ಸಂಜೆ ೬.೩೦.
  • ಕಿರುರಂಗಮಂದಿರದಲ್ಲಿ ಹೆಚ್.ಎಸ್.ಸುರೇಶ್ ಬಾಬು ನಿರ್ದೇಶನದ ಚಿದಂಬರ ರಹಸ್ಯ(ಕನ್ನಡ).ಸಮಯ ಸಂಜೆ 7 ಕಲಾಮಂದಿರದಲ್ಲಿ ಬಿ.ಜಯಶ್ರೀ ನಿರ್ದೇಶನದ ಕರಿಮಾಯಿ(ಕನ್ನಡ). ಸಮಯ ಸಂಜೆ 7.30.
  • ಡಿಸೆಂಬರ್‌ 11 ರಂದು ಭೂಮಿಗೀತದಲ್ಲಿ ಪ್ರೊ.ಹೆಚ್.ಎಸ್.ಉಮೇಶ್ ನಿರ್ದೇಶನದ ಲೀಲಾವತಿ(ಕನ್ನಡ).ಸಂಜೆ 6.30 ಕಿರುರಂಗಮಂದಿರದಲ್ಲಿ ಪ್ರಮೋದ್ ಶಿಗ್ಗಾಂವ್ ನಿರ್ದೇಶನದ ಚಂದ್ರಹಾಸ(ಕನ್ನಡ).ಸಂಜೆ 7.00 ಕಲಾಮಂದಿರದಲ್ಲಿ ಎಸ್.ಮುರುಘಭೂಪತಿ ನಿರ್ದೇಶನದ ಇಡಕಿಣಿ ಕಥಾಯರಥಂ(ತಮಿಳು).ಸಂಜೆ 7.30.
  • ಡಿಸೆಂಬರ್‌ 12 ರಂದು ಭೂಮಿಗೀತದಲ್ಲಿ ಹೈಸ್ನಾಂ ತೋಂಬ ನಿರ್ದೇಶನದ ಇಮಾ ನಂಗಿ ನತಂಬಾಕ್ತ(ಮಣಿಪುರಿ) ಸಂಜೆ 6.30, ಕಿರುರಂಗಮಂದಿರದಲ್ಲಿ ದಿವಾಕರ್ ಕಟೀಲ್ ನಿರ್ದೇಶನದ ಕಾಪ(ತುಳು ನಾಟಕ).ಸಂಜೆ 7.00., ಕಲಾಮಂದಿರದಲ್ಲಿ ಮಾಲತಿ ಸುಧೀರ್ ನಿರ್ದೇಶನದ ಗೌಡ್ರ ಗದ್ಲ(ಕನ್ನಡ) ಸಂಜೆ.7.30.
  • ಡಿಸೆಂಬರ್‌ 13 ರಂದು ಭೂಮಿಗೀತದಲ್ಲಿ ಅಭಿಷೇಕ್ ಅಯ್ಯಂಗಾರ್ ನಿರ್ದೇಶನದ ಬೈ2 ಕಾಫಿ (ಕನ್ನಡ) ಸಂಜೆ 6.30 ಕಿರುರಂಗಮಂದಿರದಲ್ಲಿ ವಾಲ್ಟರ್ ಡಿಸೋಜಾ ನಿರ್ದೇಶನದ ತುಕ್ಕೋಜಿ(ಕನ್ನಡ), ಕಲಾಮಂದಿರದಲ್ಲಿ ಪ್ರಶಾಂತ್ ಉದ್ಯಾವರ ನಿರ್ದೇಶನದ ಉಡಿಯೊಳಗಣ ಕಿಚ್ಚು(ಕನ್ನಡ)ಸಂಜೆ 7.30. ವನರಂಗದಲ್ಲಿ ನಿತಿನ್ ಶರ್ಮಾ ನಿರ್ದೇಶನದ ಬೋಡಾಸ್ ದೇ ಸಾಂಗ್ರೆ( ಪಂಜಾಬಿ) ಸಂಜೆ 7.30
  • ಡಿಸೆಂಬರ್‌ 14 ರಂದು ಭೂಮಿಗೀತದಲ್ಲಿ ಆಶಿಷ್ ಶ್ರೀವಾಸ್ತವ್ ನಿರ್ದೇಶನದ ಬೆಟರ್ ಹಾಫ್(ಹಿಂದಿ) ಸಂಜೆ 6.30 ,ಕಿರುರಂಗಮಂದಿರದಲ್ಲಿ ಡಾ.ಅರವಿಂದ ಕುಲಕರ್ಣಿ ನಿರ್ದೇಶನದ ಪಂಚಕನ್ಯಾಸ್ಮರೇನಿತ್ಯಂ(ಕನ್ನಡ).ಸಂಜೆ 7.00.,ಕಲಾಮಂದಿರದಲ್ಲಿ ಟಿ.ಎಸ.ನಾಗಾಭರಣ ನಿರ್ದೇಶನದ ವಿದ್ಯಾಸುಂದರಿ ಬೆಂಗಳೂರು ನಾಗರತ್ನಮ್ಮ(ಕನ್ನಡ), ಸಂಜೆ.7.30.

    15 ತಾ. ರಂದು ಭೂಮಿಗೀತದಲ್ಲಿ ಡಾ.ಚಂದ್ರದಾಸನ್ ನಿರ್ದೇಶನದ ಛಾಯಾ ಚಿತ್ರಂ ಮಾಯಾ ಚಿತ್ರಂ(ಮಲಯಾಳಂ) ಸಂಜೆ.6.30, ಕಿರುರಂಗಮಂದಿರದಲ್ಲಿ ಅಕ್ಷತಾ ಮಾಯಸಂದ್ರ ನಿರ್ದೇಶನದ ಅವನಿ(ಕನ್ನಡ) ಸಂಜೆ.7.00 ಕಲಾಮಂದಿರದಲ್ಲಿ ಸುರಭಿ ಜಯಚಂದ್ರವರ್ಮ ನಿರ್ದೇಶನದ ಮಾಯಬಜಾರ್(ತೆಲುಗು) ಸಂಜೆ.7.30 ಕ್ಕೆ ಪ್ರದರ್ಶನಗೊಳ್ಳಲಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!