Mysore
29
overcast clouds

Social Media

ಶನಿವಾರ, 13 ಜೂನ್ 2026
Light
Dark

ಭಗವದ್ಗೀತೆ ಕಂಠಪಾಠ ಸ್ಫರ್ಧೆ: ಮಹರ್ಷಿ ಶಾಲೆಗೆ ಬಹುಮಾನ

ಮೈಸೂರು: ಶೃಂಗೇರಿಯಲ್ಲಿ ಈಚೆಗೆ ನಡೆದ ಭಗವದ್ಗೀತೆಯ 18 ಅಧ್ಯಾಯಗಳ ಕಂಠಪಾಠ ಸ್ಪರ್ಧೆಯಲ್ಲಿ ಮೈಸೂರಿನ ಮಹರ್ಷಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ವಿಜೇತರಾಗಿ ಬಹುಮಾನ ಪಡೆದುಕೊಂಡಿದ್ದಾರೆ.
ಶಾಲೆಯ ವಿದ್ಯಾರ್ಥಿಗಳಾದ ಶಿವಾನಿ ಎ.ಹೊಯ್ಸಳ, ಎಸ್.ರಾಘವೇಂದ್ರ ಆತ್ರೇಯ, ಎ.ಶ್ರೀರಂಗಪ್ರಭು, ಎಂ.ಎಲ್.ಶ್ರಾವಣಿ, ಪಿ.ಅನಿರುದ್ಧ, ಸಂಜೀವ್ ಜತೋಲಿಯ, ಡಿ.ಆರ್.ಸಂಜಿತ್ ಅವರು ಭಗವದ್ಗೀತೆಯ 18 ಅಧ್ಯಾಯಗಳ ಕಂಠಪಾಠ ಸ್ಪರ್ಧೆಯಲ್ಲಿ 700 ಶ್ಲೋಕಗಳನ್ನು ಸುಲಲಿತವಾಗಿ ಪಠಣ ಮಾಡಿ ಶ್ರೀಗಳಿಂದ ಆಶೀರ್ವಾದ ಪೂರಕವಾಗಿ ತಲಾ 21.000 ರೂ. ನಗದು ಬಹುಮಾನಗಳನ್ನು ಪಡೆದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಈ ಎಲ್ಲ ವಿದ್ಯಾರ್ಥಿಗಳನ್ನು ಮತ್ತು ಯಶಸ್ಸಿಗೆ ಶ್ರಮಿಸಿದ ಸಂಸ್ಕೃತ ವಿಭಾಗದ ಶಿಕ್ಷಕರಾದ ಶೈಲಜಾ, ಎ.ಬಿ.ರಾಘವೇಂದ್ರ ಮತ್ತು ವಿಜಯಕುಮಾರ್ ಅವರನ್ನು ಮಹರ್ಷಿ ವಿದ್ಯಾಸಂಸ್ಥೆಯ ವ್ಯವಸ್ಥಾಪಕ ವಿಶ್ವಸ್ಥ ಡಾ.ಭವಾನಿ ಶಂಕರ್, ಸಂಯೋಜಕ ತೇಜಸ್ ಬಿ.ಶಂಕರ್, ಸಂಸ್ಥೆಯ ಪ್ರಾಚಾರ್ಯ ಗೋಪಾಲ ಸ್ವಾಮಿ, ಎ.ಕುಮಾರ್ ಮತ್ತು ಸತೀಶ್ ಅಭಿನಂದಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!