ಶ್ರೀರಂಗಪಟ್ಟಣ ಹೊರ ವಲುಂದ ಚಂದ್ರವನ ಆಶ್ರಮದಲ್ಲಿ ನವರಾತ್ರಿ ಉತ್ಸವ
ಶ್ರೀರಂಗಪಟ್ಟಣ: ಪ್ರತಿಯೊಬ್ಬರಿಗೂ ತಮ್ಮದೇ ಆದ ಸವಾಲುಗಳಿವೆ. ಅವುಗಳನ್ನು ಮೆಟ್ಟಿ ನಿಲ್ಲಬೇಕು, ಜಾಣ್ಮೆ, ತಾಳ್ಮೆ, ಸಂಯಮದಿಂದ ಗುರಿ ಮುಟ್ಟಬೇಕು ಎಂದು ಚಂದ್ರವನ ಆಶ್ರಮದ ಪೀಠಾಧ್ಯಕ್ಷ ತ್ರಿನೇತ್ರ ಮಹಂತ ಶಿವೋಂಗಿ ಸ್ವಾಮೀಜಿ ಸಲಹೆ ನೀಡಿದರು.
ಪಟ್ಟಣದ ಹೊರ ವಲಯದಲ್ಲಿರುವ ಚಂದ್ರವನ ಆಶ್ರಮದಲ್ಲಿ ನಡೆದ ನವರಾತ್ರಿ ಉತ್ಸವದ ಸವಾರೋಪ ಸವಾರಂಭ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರಿಗೆ ‘ಕಾಯಕ ಸೇವಾ ಧುರೀಣ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ನಕಾರಾತ್ಮಕ ಭಾವನೆಗಳನ್ನು ತೊಡೆದು ಸಕಾರಾತ್ಮಕ ಅಂಶಗಳಿಗಷ್ಟೇ ಒತ್ತು ಕೊಟ್ಟು ಶ್ರಮಿಸ ಬೇಕು. ಆಗ ಯಶಸ್ಸು ತಮ್ಮದಾಗುತ್ತದೆ. ಪ್ರತಿ ಹಂತದಲ್ಲಿಯೂ ಗೆಲುವು ಸಿಗುವುದು ಕಷ್ಟ, ಸೋಲಿನಿಂದ ಧೃತಿಗೆಡಬಾರದು, ಸವಾಲಾಗಿ ಸ್ವೀಕರಿಸಬೇಕು ಎಂದು ಕಿವಿಮಾತು ಹೇಳಿದರು.
ಶಿವಗಂಗಾ ಕ್ಷೇತ್ರದ ಶ್ರೀ ಮೇಲಗಣವಿ ವೀರಸಿಂಹಾಸನ ಸಂಸ್ಥಾನ ಮಠದ ಪೀಠಾಧ್ಯಕ್ಷ ಮಲಯ ಶಾಂತಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಂ ಮತ್ತು ಹರರ ಕ್ಷೇತ್ರದ ಚಂದ್ರವನ, ಮೈಸೂರು ರಾಜಮನೆತನದವು ಸ್ಥಾಪಿಸಿದ ಈ ಸ್ಥಳ ಅಜ್ಞಾತವಾಗಿತ್ತು. ಅಹಲ್ಯಯಂತೆ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮೀಜಿ ಅವರಿಂದಾಗಿ ಎದ್ದು ನಿಂತಿದೆ. ಸಂತರು, ಮಹಂತರು ತನಗಾಗಿ ದೇವರಲ್ಲಿ ಏನೂ ಕೇಳುವುದಿಲ್ಲ. ಹಾಗಾಗಿ ಸಂತರ ನೆರಳು ಬಿದ್ದ ಸ್ಥಳಗಳು ಅಭಿವೃದ್ಧಿಯಾಗುತ್ತವೆ. ದೇವರು ಅವರಿಗೆ ಆ ಶಕ್ತಿ ಕೊಟ್ಟಿದ್ದಾನೆ ಎಂದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದಿಂದ ಲಯನ್ ಕೆ.ದೇವೇಗೌಡ, ವೈದ್ಯಕೀಯ ಕ್ಷೇತ್ರದಿಂದ ಡಾ.ಜಗದೀಶ್, ಮಲ್ಲೋಳಿ, ಉದ್ಯಮ ಕ್ಷೇತ್ರದಿಂದ ಪರಮೇಶ ಲಿಂಗಾಯತ, ಕರಕುಶಲ ಕ್ಷೇತ್ರದಿಂದ ಡಾ.ರಾಧಾ ಮಲ್ಲಪ್ಪ. ರಂಗಭೂಮಿ ಕ್ಷೇತ್ರದಿಂದ ಶ್ರೇಷ್ಠ ಎಸ್.ಜುಪ್ತಿಮಠ ಅವರಿಗೆ ‘ಕಾಯಕ ಸೇವಾ ಧುರೀಣ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ನೂರಾರು ಜನ ಮಹಿಳೆಯರಿಗೆ ಮಡಿಲಕ್ಕಿಯನ್ನು ಶ್ರೀಗಳು ವಿತರಿಸಿದರು.
ಸಂಸದ ಬಿ.ವೈ.ರಾಘವೇಂದ್ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಸಿ.ಎಸ್. ಪುಟ್ಟರಾಜು ಮಾತನಾಡಿದರು. ವಿಧಾನ ಪರಿಷತ್ ವಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್, ಜಿಲ್ಲಾ ಪಂಚಾಯಿತಿ ವಾಜಿ ಅಧ್ಯಕ್ಷ ತಗ್ಗಳ್ಳಿ ವೆಂಕಟೇಶ್, ಮನ್‌ಮುಲ್ ನಿರ್ದೇಶಕ ಎಸ್.ಸಿ.ಅಶೋಕ್, ಮುಖಂಡರಾದ ರಾಜೇಶ್‌ಗೌಡ ಮತ್ತಿತರರು ಭಾಗವಹಿಸಿದ್ದರು.
ಚಂದ್ರವನ ಆಶ್ರಮದಲ್ಲಿ ನಡೆುುಂವ ಕಾರ್ಯಕ್ರಮಗಳು ಅರ್ಥಪೂರ್ಣವಾಗಿರುತ್ತವೆ. ಶ್ರೀ ತ್ರಿನೇತ್ರ ಸ್ವಾಮಿಗೆ ದಿವ್ಯಶಕ್ತಿ ಇದೆ. ಇದು ನನ್ನ ತಾಯಿ ಮಠ. ಮಠದಲ್ಲಿ ನಿರ್ಮಾಣವಾಗುತ್ತಿರುವ ಯೋಗ ಶಾಲೆ ಕಟ್ಟಡವನ್ನು ಪೂರ್ಣಗೊಳಿಸುತ್ತೇನೆ.
-ಸಿ.ಎಸ್.ಪುಟ್ಟರಾಜು, ಶಾಸಕರು.