Mysore
24
overcast clouds

Social Media

ಗುರುವಾರ, 20 ಆಗಸ್ಟ್ 2026
Light
Dark

ಅಪ್ಪು ಸ್ಮರಣೆ : ಮಹಾಲಕ್ಷ್ಮೀ ಸ್ವೀಟ್ಸ್ ನೌಕರರಿಗೆ ದ್ವಿಚಕ್ರ ವಾಹನ ಕೊಡುಗೆ

ಮೈಸೂರು: ಪುನೀತ್ ರಾಜ್ ಕುಮಾರ್ ಅಭಿಮಾನಿಗಳಾಗಿರುವ ಶ್ರೀ ಮಹಾಲಕ್ಷ್ಕೀ ಸ್ವೀಟ್ಸ್‌ನ ಮಾಲೀಕರರಾದ ಶಿವಕುಮಾರ್ ಮತ್ತು ಅವರ ಪುತ್ರ ನಿತಿನ್ ಶಿವಕುಮಾರ್ ಅವರು ಅಪ್ಪು ಅವರ ಸಮಾಜ ಸೇವೆಯಿಂದ ಪ್ರೇರಿತರಾಗಿ ಶ್ರೀ ಮಹಾಲಕ್ಷ್ಮೀ ಚಾರಿಟಬಲ್ ಟ್ರಸ್ಟ್ ರಚಿಸಿ, ಹತ್ತು ಹಲವು ಸಮಾಜ ಮುಖಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು, ಅಪ್ಪು ನಿಧನರಾಗಿ ಒಂದು ವರ್ಷಗಳಾದ ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆಯ ಹಿರಿಯ ನೌಕರರಿಗೆ ೧೦೮ ದ್ವಿಚಕ್ರ ವಾಹನಗಳನ್ನು ಕೊಡುಗೆಯಾಗಿ ನೀಡಿದ್ದಾರೆ.
ಶಾಸಕ ಜಿ.ಟಿ.ದೇವೇಗೌಡ ಅವರ ಸಮ್ಮುಖದಲ್ಲಿ ಐವರು ನೌಕರರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಲಾಯಿತು. ಯುವ ಮುಖಂಡ ಮದನ್ ಗೌಡ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!