Light
Dark

ಆಂದೋಲನ ಸುದ್ದಿಗೆ ಎಚ್ಚೆತ್ತು ಹೆಸರು ಬದಲಾಯಿಸಿದ ಅಪೋಲೋ ಫಾರ್ಮಸಿ!

ಚಾಮರಾಜನಗರ: ನಗರದಲ್ಲಿ ನೂತನವಾಗಿ ಪ್ರಾರಂಭವಾಗುತ್ತಿರುವ ಅಪೋಲೋ ಫಾರ್ಮಸಿ ಆಂದೋಲನ ಸುದ್ದಿಗೆ ಎಚ್ಚೆತ್ತುಕೊಂಡು ನಾಮಫಲಕದಲ್ಲಿ ಬಿ.ರಾಚಯ್ಯ ಜೋಡಿ ರಸ್ತೆ ಎಂದು ಬರೆದಿದೆ.

ನಗರಸಭೆಯಿಂದ ಬಿ.ರಾಚಯ್ಯ ಜೋಡಿ ರಸ್ತೆ ಎಂದು ಅಧಿಕೃತವಾಗಿದ್ದರೂ ನೂತನವಾಗಿ ಪ್ರಾರಂಭವಾಗುತ್ತಿರುವ ಅಪೋಲೋ ಫಾರ್ಮಸಿ ನಾಮಫಲಕದಲ್ಲಿ ಬಿ.ಆರ್.ಹಿಲ್ಸ್ ಜೋಡಿ ರಸ್ತೆ ಎಂದು ಬರೆಯುವ ಮೂಲಕ ಬಿ.ರಾಚಯ್ಯ ಅವರಿಗೆ ಅಪಮಾನವೆಸಗಿದೆ ಎಂದು ಆಂದೋಲನ ವೆಬ್ ನಲ್ಲಿ ವರದಿ ಮಾಡಿತ್ತು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವೂ ವ್ಯಕ್ತವಾಗಿತ್ತು.

ಕಡೆಗೂ ಆಂದೋಲನ ಸುದ್ದಿಗೆ ಎಚ್ಚೆತ್ತುಕೊಂಡ ಅಪೋಲೋ ಫಾರ್ಮಸಿ ತನ್ನ ತಪ್ಪನ್ನು ಅರಿತು ಬಿ.ರಾಚಯ್ಯ ಜೋಡಿ ರಸ್ತೆ ಎಂದು ಬದಲಾವಣೆ ಮಾಡಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ