Mysore
20
broken clouds

Social Media

ಶುಕ್ರವಾರ, 28 ಆಗಸ್ಟ್ 2026
Light
Dark

ಅಮಿತ್ ಶಾ ಅವರದು ಸೌಹಾರ್ದ ಭೇಟಿ : ಸಚಿವ ವಿ ಸೋಮಣ್ಣ

ಚಾಮರಾಜನಗರ: ಗೃಹ ಸಚಿವ ಅಮಿತ್ ಶಾ ಅವರು ನನ್ನ ಮನೆಗೆ ಬಂದಿದ್ದು ಸೌಹಾರ್ದ ಭೇಟಿಯಷ್ಟೇ. ಕೆಲಸಗಾರನ ಸಾಮರ್ಥ್ಯ ಗುರುತಿಸಿ ಭೇಟಿ ಕೊಟ್ಟಿದ್ದು ಇದರಿಂದ ಯಾರಿಗೂ ಅನ್ಯಾಯ ಆಗುವುದಿಲ್ಲ ಎಂದು ವಸತಿ ಸಚಿವ ವಿ.ಸೋಮಣ್ಣ ಹೇಳಿದರು.
ತಾಲ್ಲೂಕಿನ ಕಾಗಲವಾಡಿಮೋಳೆಯಲ್ಲಿ ಅಮಿತ್ ಶಾ ಭೇಟಿ ಕುರಿತು ಸುದ್ದಿಗಾರರ
ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದ ಸಿದ್ಧಾಂತದಡಿ ನಾಲ್ಕು ಗೋಡೆಗಳ ಮಧ್ಯೆ ನಾನು ಕೆಲಸ ಮಾಡುತ್ತಿರುವುದು ಹೊರ ಜಗತ್ತಿಗೂ ಈಗ ಗೊತ್ತಾಗಿದೆ ಎಂದರು.
ಗೃಹ ಸಚಿವರೊಬ್ಬರು ರಾಜ್ಯದ ಮುಖಂಡನ ಮನೆಗೆ ಮಾಹಿತಿಯಿಲ್ಲದೇ ಬರುತ್ತಾರೆಯೇ? ಮುಂದೆಯೂ ಡಬಲ್ ಎಂಜಿನ್ ಸರ್ಕಾರ ಬರಬೇಕು ಎನ್ನುವುದು ಅವರ ಉದ್ದೇಶ. ಅಮಿತ್ ಶಾ ಇಷ್ಟೊಂದು ಹೃದಯ ಸಂಪನ್ನರೆAದು ಗೊತ್ತಿರಲಿಲ್ಲ. ಅವರ ಭೇಟಿಯಿಂದ ರಾಜ್ಯಕ್ಕೆ ಅನುಕೂಲವಾಗುತ್ತದೆ. ಯಾವ ಸಮಯಕ್ಕೆ ಏನು ಆಗಬೇಕು ಅದು ಆಗುತ್ತದೆ ಎಂದು ಉತ್ತರಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!