Mysore
28
few clouds

Social Media

ಸೋಮವಾರ, 17 ಫೆಬ್ರವರಿ 2025
Light
Dark

ನಂಜನಗೂಡು ಬಳಿಕ ಈಗ ಮೈಸೂರಿನ ಗ್ರಾಮಗಳಲ್ಲಿ ಹುಲಿ ಪ್ರತ್ಯಕ್ಷ

ಮೈಸೂರು : ಕಳೆದ ಎರಡು ದಿನಗಳ ಹಿಂದೆಯಷ್ಟೇ ನಂಜನಗೂಡು ಮತ್ತು ಹೆಚ್‌.ಡಿ.ಕೋಟೆ ತಾಲೂಕಿನ ಸುತ್ತ ಕಾಣಿಸಿಕೊಂಡಿದ್ದ ನರಭಕ್ಷಕ ಹುಲಿಯನ್ನು ಹಿಡಯುವಲ್ಲಿ ಅರಣ್ಯಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಹುಲಿಯ ಓಡಾಟದಿಂದ ಕಂಗಾಲಾಗಿದ್ದ ಜನರು ನಿಟ್ಟುಸಿರು ಬಿಟ್ಟಿದ್ದರು. ಆದರೆ ದೀಗ ಮೈಸೂರು ವ್ಯಾಪ್ತಿಗೆ ಸೇರಿದ ಗ್ರಾಮಗಳ ಸುತ್ತಾ-ಮುತ್ತ ಹುಲಿಯೊಂದು ಕಾಣಿಸಿಕೊಂಡಿದೆ.

ಮೈಸೂರಿನ ಚಿಕ್ಕಕಾನ್ಯ, ದೊಡ್ಡಕಾನ್ಯ, ಬ್ಯಾತಹಳ್ಳಿ, ಸಿಂಧುವಳ್ಳಿ, ಗ್ರಾಮಗಳಲ್ಲಿ ಹುಲಿ ಕಾಣಿಸಿಕೊಂಡಿದ್ದು, ಗ್ರಾಮದ ಜನತೆಯ ನಿದ್ದೆಗೆಡಿಸಿದೆ. ಗ್ರಾಮದ ಸುತ್ತಾ-ಮುತ್ತ ಎಲ್ಲಾದರೂ ಹುಲಿ ಕಾಣಿಸಿಕೊಂಡಲ್ಲಿ ತಕ್ಷಣ ಅರಣ್ಯ ಇಲಾಕೆಗೆ ಮಾಹಿತಿ ನೀಡುವಂತೆ ಅರಣ್ಯಾಧಿಕಾರಿಗಳು ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಮೂರು ಹುಲಿಗಳ ದರ್ಶನ:
ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರು ಕೆಲಸ ಮುಗಿಸಿಕೊಂಡು ಹೋಗುವ ಸಂದರ್ಭದಲ್ಲಿ ಹುಲಿ ಕಾಣಿಸಿಕೊಂಡಿದೆ. ತಾಂಡ್ಯಾ ಹಾಗೂ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ, ರಾತ್ರಿ ಪಾಳಿಯ ಕೆಲಸ ಮುಗಿಸಿ ಹೋಗುವಾಗ ಹುಲಿ ಪ್ರತ್ಯಕ್ಷವಾಗಿದೆ. ಆದರೇ ಕೆಲವು ಕಾರ್ಮಿಕರು ಹೇಳುವ ಪ್ರಕಾರ ರಾತ್ರಿ ಒಟ್ಟು ಮೂರು ಹುಲಿಗಳು ಕಾಣಿಸಿಕೊಂಡಿತ್ತು ಎನ್ನುತ್ತಾರೆ. ಇದೀಗ ಹುಲಿ ಕಾಣಿಸಿಕೊಂಡ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು. ಅರಣ್ಯಾಧಿಕಾರಿಗಳು ಹುಲಿಯ ಜಾಡನ್ನು ಹಿಡಿದು ಸೆರೆ ಹಿಡಿಯಲು ಮುಂದಾಗಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ