Light
Dark

ಸೆ. 26ರಿಂದ 90ದಿನಗಳ ಕಾಲ ದಸರಾ ವಸ್ತು ಪ್ರದರ್ಶನ : ಮಿರ್ಲೆ ಶ್ರೀನಿವಾಸ್‌ಗೌಡ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾದ ಈ ಬಾರಿಯ ವಸ್ತು ಪ್ರದರ್ಶನವು ಸೆ.26ರಿಂದ ಪ್ರಾರಂಭವಾಗಲಿದೆ ಎಂದು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಅವರು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈ ಬಾರಿ ವಿಶೇಷ ಕಾರ್ಯಕ್ರಮಗಳೊಂದಿಗೆ 90 ದಿನಗಳ ಕಾಲ ವಸ್ತುಪ್ರದರ್ಶನ ಆಯೋಜನೆಗೊಳಿಸಲಾಗಿದೆ. ವಸ್ತುಪ್ರದರ್ಶನದಲ್ಲಿ ಪುನೀತ್ ರಾಜ್ ಕುಮಾರ್ ನೆನಪಿಗಾಗಿ 7 ಸ್ಯಾಂಡ್ ಮ್ಯೂಸಿಯಂ,
ಯೋಗ 3ಡಿ ವಿಡಿಯೋ ಮ್ಯಾಪಿಂಗ್ ಸೇರಿದಂತೆ ಕಾವೇರಿ ಬಹುಮಾಧ್ಯಮ ಕಲಾ ಗ್ಯಾಲರಿ ಉದ್ಘಾಟನೆ ಮಾಡಲಾಗುವುದು ಎಂದರು.

ಪ್ರತ್ಯೇಕ ಆವರಣಗಳಲ್ಲಿ ವೆಜ್ ಅಂಡ್ ನಾನ್ ವೆಜ್  ಸ್ಟಾಲ್ ಗಳಿಗೆ ವ್ಯವಸ್ಥೆ ಮಾಡಲಾಗಿದೆ ಎಂದರು. ಇದರ ಜೊತೆಗೆ 6 ಮಂದಿ ಸ್ವಾತಂತ್ರ್ಯ ಹೋರಾಟಗಾರರ ಮರಳು ಕೃತಿಯನ್ನು ರಚಿಸಲಾಗುವುದು. ಆ 6ಮಂದಿ ಸ್ವಾತಂತ್ರ್ಯ ಹೋರಾಟಗಾರರು ಯಾರು ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದರು.

ವಸ್ತುಪ್ರದರ್ಶನದ ಅವರಣವನ್ನ ಪ್ಲಾಸ್ಟಿಕ್ ಮುಕ್ತ ವಲಯ ಎಂದು ಘೋಷಣೆ ಹಿನ್ನೆಲೆ ಪ್ಲಾಸ್ಟಿಕ್ ಬಳಸುವಂತಿಲ್ಲ,
ಪ್ಲಾಸ್ಟಿಕ್ ಬಳಕೆ ತಡೆಗಟ್ಟಲು ಪ್ರಾಧಿಕಾರದ ವತಿಯಿಂದಲೇ ಆರ್ ಓ ಪ್ಲಾಂಟ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತದೆ.  ಎರಡು ವರ್ಷಗಳ ಕೋವಿಡ್ ಬಳಿಕ ನಡೆಯುತ್ತಿರುವ ಅದ್ದೂರಿ ವಸ್ತು ಪ್ರದರ್ಶನ ಇದಾಗಿದೆ, ಹೀಗಾಗಿ
ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು, ನಗರದ ಜನತೆ ಆಗಮಿಸುವಂತೆ ಮಿರ್ಲೆ ಶ್ರೀನಿವಾಸ್ ಗೌಡ ಮನವಿ ಮಾಡಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ