ಮೈಸೂರು: ವೃದ್ಧೆಯೊಬ್ಬರ ಖಾತೆಯಿಂದ 54.62ಲಕ್ಷ ರೂ.ಗಳನ್ನು ಅಕ್ರಮವಾಗಿ, ಮೋಸದಿಂದ ವರ್ಗಾವಣೆ ಮಾಡಿಕೊಂಡ ಆರು ಮಂದಿಯ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರುಣ್, ಲೀಲಾವತಿ, ಮರಿಚಿಕ್ಕಸಿದ್ದು, ಶಿವು, ಇಮ್ತಿಯಾಜ್ ಮತ್ತು ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ವ್ಯವಸ್ಥಾಪಕರ ವಿರುದ್ಧ ದೂರು ದಾಖಲಾಗಿದೆ. ಮೈಸೂರು ತಾಲ್ಲೂಕಿನ ಕೆ.ಎಂ.ಹುಂಡಿಯ ಮಾಲಮ್ಮ (೬೫) ಎಂಬವರೇ ದೂರು ದಾಖಲಿಸಿರುವುದು.
ಅರುಣ್ ಮತ್ತು ಇವರ ಪತ್ನಿ ಲೀಲಾವತಿ, ಕೆಂಪಸಿದ್ದನಹುಂಡಿ ಗ್ರಾಮದ ಮರಿಚಿಕ್ಕಸಿದ್ದು, ಇವರ ಮಗ ಶಿವು, ಇಮ್ತಿಯಾಜ್, ಹೂಟಗಳ್ಳಿಯ ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಮ್ಯಾನೇಜರ್ ಒಟ್ಟಿಗೆ ಸೇರಿಕೊಂಡು ಕೆಐಎಡಿಬಿಯಿಂದ ಪರಿಹಾರ ಹಣವಾಗಿ ನನ್ನ ತಾಯಿ ಸಿದ್ದಮ್ಮ ಅವರ ಖಾತೆಗೆ ಬಂದಂತಹ ೫೪.೬೨ ಲಕ್ಷ ರೂ. ಹಣವನ್ನು ನನ್ನ ಖಾತೆಗೆ ವರ್ಗಾಯಿಸಿ ನಂತರ ನನಗೆ ತಿಳಿಯದ ಹಾಗೆ ತಮ್ಮ ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.