ಮೈಸೂರು: ‘ಅರಿವು ರಂಗ’ ವತಿಯಿಂದ ‘ಸಲೀಂ ಅಲಿ – ಪಕ್ಷಿಲೋಕದ ಬೆರಗು’ ನಾಟಕ ಪ್ರದರ್ಶನವನ್ನು ಡಿ. 24ರಂದು ಸಂಜೆ ೬6.30ಕ್ಕೆ ನಗರದ ಕಲಾಮಂದಿರ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ಭಾರತದ ಹೆಸರಾಂತ ಪಕ್ಷಿತಜ್ಞ, ಪದ್ಮಭೂಷಣ ಡಾ. ಸಲೀಂ ಅಲಿ ಅವರ ಜೀವನಾಧಾರಿತ ನಾಟಕ ಇದಾಗಿದ್ದು, ಡಾ. ಎಂ.ಸಿ.ಮನೋಹರ ರಚಿಸಿದ್ದಾರೆ. ಬರ್ಟಿ ಒಲಿವೇರಾ ನಿರ್ದೇಶನದ ಈ ನಾಟಕಕ್ಕೆ ಸಾಯಿಶಿವ್ ಸಂಗೀತ, ಯತೀಶ್ ಎನ್. ಕೊಳ್ಳೇಗಾಲ ರಂಗವಿನ್ಯಾಸ-ಬೆಳಕು, ಕಾಜು ರಂಗ ಪರಿಕರ, ರಜನಿ ವಸ್ತ್ರವಿನ್ಯಾಸ, ಎಂ.ಸಿ.ಗಿರಿಧರ ಸಂಗೀತ ನಿರ್ವಹಣೆ, ರಂಗನಾಥ್ ಪ್ರಸಾಧನ ಮಾಡಿದ್ದಾರೆ. ಎಚ್.ತೇಜಸ್, ಡಾ.ಎಂ.ಸಿ.ಮನೋಹರ, ಡಾ.ಆರ್.ಚಲಪತಿ, ಬರ್ಟಿ ಒಲಿವೆರಾ, ಸರಳಾ ನಟರಾಜ್, ಬಿ.ಸೀಮಂತಿನಿ, ನಾಗರಾಜ್ ಮೈಸೂರು, ಪ್ರಸಾದ್ ಬಾಬು ನಟಿಸಿದ್ದಾರೆ.
ಸಲೀಂ ಅಲಿ ಅವರ ಕುರಿತು ಭಾರತದಲ್ಲಿ ಇದೇ ಮೊದಲ ಬಾರಿಗೆ, ಅದರಲ್ಲೂ ಕನ್ನಡದಲ್ಲಿ ಪೂರ್ಣ ಪ್ರಮಾಣದ ನಾಟಕ ಪ್ರದರ್ಶಿತವಾಗುತ್ತಿರುವುದು ವಿಶೇಷ. ಈ ನಾಟಕದಲ್ಲಿ ಬಾಲ್ಯ, ಯೌವ್ವನ, ಅಂತಿಮ ದಿನಗಳು ಸೇರಿದಂತೆ ಸಲೀಂ ಅಲಿ ಅವರ ಜೀವನ ಮತ್ತು ಸಾಧನೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ.





