ಮೈಸೂರು : ಇಂದು ಮಂಡನೆಯಾದ 2023ರ ಕೇಂದ್ರ ಬಜೆಟ್ ಕುರಿತು ಜಿಲ್ಲೆಯ ಉಸ್ತುವಾರಿ ಸಚಿವರಾದ ಎಸ್ ಟಿ ಸೋಮಶೇಖರ್ ರವರು ಕೇಂದ್ರ ಸರ್ಕಾರದ ಈ ಸಾಲಿನ ಬಜೆಟ್, ಜನಪರ ಬಜೆಟ್. ಸಮಾಜದ ಎಲ್ಲ ವರ್ಗಗಳ ನಿರೀಕ್ಷೆಯನ್ನು ಪೂರೈಸಲಿದೆ. ಎಲ್ಲರನ್ನೂ ಗಮನದಲ್ಲಿಟ್ಟುಕೊಂಡು ರೂಪಿಸಿದ ಬಜೆಟ್ ಇದಾಗಿದೆ ಎಂದರು. ಮುಂದುವರಿದು ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ ಘೋಷಣೆ ಮಾಡಲಾಗಿದೆ. ಇದರಿಂದ ಮಧ್ಯ ಕರ್ನಾಟಕದ ಭಾಗದ ಜಿಲ್ಲೆಗಳಿಗೆ ವರದಾನವಾಗಲಿದೆ. ಸನ್ಮಾನ್ಯ ಪ್ರಧಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿ, ವಿತ್ತ ಸಚಿವರಾದ ನಿರ್ಮಲಾ ರವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 7 ಲಕ್ಷದವರೆಗೆ ವೈಯಕ್ತಿಕ ತೆರಿಗೆ ವಿನಾಯ್ತಿ, ಕೃಷಿ ಸಾಲಕ್ಕೆ 20 ಲಕ್ಷ ಕೋಟಿ ರೂ. ಮಿಸಲು, 50 ಹೊಸ ಏರ್ ಪೋರ್ಟ್ ಗಳ ಸ್ಥಾಪನೆ, ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯಗಳ ಸ್ಥಾಪನೆ ಸೇರಿದಂತೆ ಹತ್ತು ಹಲವು ಯೋಜನೆಗಳ ಘೋಷಣೆ ಮಾಡಲಾಗಿದೆ. ಒಟ್ಟಾರೆ ಈ ಬಜೆಟ್ ಎಲ್ಲಾ ವರ್ಗದ ಜನತೆಯನ್ನು ಒಳಗೊಂಡ ಜನಪರ ಬಜೆಟ್ ಎಂದರು.