ಮೈಸೂರು: ನಗರಕ್ಕೆ ಕಾವೇರಿ ನೀರು ಸರಬರಾಜು ಮಾಡುವ ಹೊಂಗಳ್ಳಿ ೨ ಹಾಗೂ ೩ನೇ ಹಂತದ ಯಂತ್ರಾಗಾರಕ್ಕೆ ವಿದ್ಯುತ್ ಸರಬರಾಜು ಮಾಡುವ ಬೆಳಗೊಳ ೬೬/೧೧ ಕೆ.ವಿ. ಸಬ್‌ಸ್ಟೇಷನ್‌ನಲ್ಲಿ ಕೆಪಿಟಿಸಿಎಲ್ ಇಲಾಖೆಯ ತ್ರೈಮಾಸಿಕ ಕಾರ್ಯನಿರ್ವಹಣೆ ನಿಮಿತ್ತ ವಿದ್ಯುತ್ ಸರಬರಾಜಿನಲ್ಲಿ ನಿಲುಗಡೆಯಾಗುವ ಹಿನ್ನೆಲೆಯಲ್ಲಿ ನ.೧೫ ಮತ್ತು ೧೬ರಂದು ನಗರದ ಕೆಲ ಭಾಗಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ವಾರ್ಡ್ ನಂ.೧ ರಿಂದ ೭, ವಾರ್ಡ್ ನಂ.೨೦, ೨೩, ೩೮ ವಾರ್ಡ್ ನಂ. ೪೨ ರಿಂದ ೪೫, ವಾರ್ಡ್ ನಂ.೪೭ ಇದಕ್ಕೆ ಸಂಬಂಧಪಟ್ಟ ಡಿಎಂಎ ಪ್ರದೇಶಗಳಾದ ಹೆಬ್ಬಾಳ, ಕುಂಬಾರಕೊಪ್ಪಲು, ಮಂಚೇಗೌಡನ ಕೊಪ್ಪಲು, ಕೆ.ಜಿ.ಕೊಪ್ಪಲು, ಮೇಟಗಳ್ಳಿ, ಲೋಕನಾಯಕನಗರ, ಬೃಂದಾವನ ಬಡಾವಣೆ, ಒಂಟಿ ಕೊಪ್ಪಲು, ಪಡುವಾರಹಳ್ಳಿ, ವಿನಾಯಕನಗರ, ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ, ಶಾರದಾದೇವಿ ನಗರ, ಸರಸ್ವತಿಪುರಂ, ಬೋಗಾದಿ, ವಿಜಯನಗರ ೧,೩ನೇ ಹಂತ, ಗೋಕುಲಂ ೧,೨, ೩ನೇ ಹಂತ ಹಾಗೂ ಹೊರ ವಲಯಗಳಾದ ಆರ್‌ಎಂಪಿ, ಬಿಇಎಂಎಲ್, ಯಾದವಗಿರಿ, ಬನ್ನಿಮಂಟಪ, ಎಬಿಸಿ ಬಡಾವಣೆ, ಈರನಗೆರೆ, ಸಿದ್ದಿಖಿನಗರ, ಶಿವರಾತ್ರೀಶ್ವರ ನಗರ, ತಿಲಕ್ ನಗರ, ಬಡೇಮಕಾನ್, ಹಲೀಂನಗರ.
ದೇವರಾಜ ಮೊಹಲ್ಲಾ ಭಾಗಶಃ, ಎನ್.ಆರ್.ಮೊಹಲ್ಲಾ ಭಾಗಶಃ ಪ್ರದೇಶಗಳು, ನಜರ್‌ಬಾದ್ ಮೊಹಲ್ಲಾ, ವಿದ್ಯಾರಣ್ಯಪುರಂ, ಕೃಷ್ಣಮೂರ್ತಿಪುರಂ, ಜನತಾ ನಗರ, ಕೆಎಚ್‌ಬಿ ಕಾಲೋನಿ, ಹೂಟಗಳ್ಳಿ, ವಿಜಯನಗರ ೩ನೇ ಹಂತ ಇತ್ಯಾದಿ ಪ್ರದೇಶಗಳಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಹೀಗಾಗಿ ಸಾರ್ವಜನಿಕರು ನೀರು ಬಂದ ವೇಳೆಯಲ್ಲಿ ನೀರನ್ನು ಶೇಖರಿಸಿಕೊಂಡು ನಗರಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ನೀರು ಸರಬರಾಜು ಮತ್ತು ಒಳಚರಂಡಿ ಪಶ್ಚಿಮ ವಿಭಾಗದ ಕಾರ್ಯಪಾಲಕ ಇಂಜಿನಿಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





