Mysore
21
overcast clouds

Social Media

ಶುಕ್ರವಾರ, 13 ಜೂನ್ 2025
Light
Dark

ಬಳ್ಳಾರಿ: ಕಾರ್ಖಾನೆ ನೀರಿನ ಹೊಂಡದಲ್ಲಿ ಮುಳುಗಿ ಮೂವರು ಸಾವು

ಬಳ್ಳಾರಿ: ಜಿಂದಾಲ್‌ ಉಕ್ಕಿನ ಕಾರ್ಖಾನೆಯ ನೀರಿನ ಹೊಂಡದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲು ಬಳಿ ನಡೆದಿದೆ.

ಬೆಂಗಳೂರು ಮೂಲದ ಸುಶಾಂತ್‌, ಭುವನ ಹಳ್ಳಿಯ ಜೇಡಪ್ಪ, ಚೆನ್ನೈ ಮೂಲದ ಮಹದೇವನ್‌ ಮೃತರಾಗಿದ್ದಾರೆ.

ನೀರಿನ ಹೊಂಡದ ಪೈಪ್‌ಲೈನ್‌ಲ್ಲಿ ಸಮಸ್ಯೆ ಕಂಡುಬಂದ ಹಿನ್ನಲೆ ದುರಸ್ತಿಗಾಗಿ ಈ ಮೂವರು ಹೋಗಿದ್ದಾರೆ. ಆದರೆ ನೀರನ್ನು ನಿಲ್ಲಿಸದೇ ಪೈಪ್‌ ಲೈನ್‌ ದುರಸ್ತಿ ಮಾಡಲು ಮುಂದಾಗಿದ್ದಾರೆ. ಆದರೆ ನೀರಿನ ರಭಸಕ್ಕೆ ಮಹದೇವನ್‌ ಹೊಂಡಕ್ಕೆ ಬಿದಿದ್ದಾರೆ. ಮಹದೇವನ್‌ ಅವರನ್ನು ರಕ್ಷಿಸಲು ಇನ್ನಿಬ್ಬರು ಮುಂದಾಗಿ ಅವರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಈ ಸಂಬಂಧ ತೋರಣಗಲ್ಲು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!