Mysore
24
overcast clouds

Social Media

ಶುಕ್ರವಾರ, 18 ಏಪ್ರಿಲ 2025
Light
Dark

ಮೇ 8ರ ವರೆಗೆ ʼಎಸ್‌ಐಟಿʼ ಕಸ್ಟಡಿಗೆ ಶಾಸಕ ಎಚ್‌ಡಿ ರೇವಣ್ಣ: ನ್ಯಾಯಾಲಯ ಆದೇಶ

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಮಹಿಳೆಯೊಬ್ಬರ ಅಪರಣ ಪ್ರಕರಣಕ್ಕೆ ಸಂಬಂಧಿಸಿದಂತೆ ʼಎಸ್‌ಐಟಿʼ (ವಿಶೇಷಾ ತನಿಖಾ ತಂಡ) ಇಂದ ಬಂಧನಕೊಳ್ಳಗಾಗಿರುವ ಶಾಸಕ ರೇವಣ್ಣ ಅವರನ್ನು ಮೇ.8 ವರೆಗೆ ಎಸ್‌ಐಟಿ ಕಸ್ಟಡಿಗೆ ವಹಿಸಿ 17ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ.

ಮೈಸೂರಿನ ಕೆಆರ್‌ ನಗರದಲ್ಲಿ ಸಂತ್ರಸ್ತ ಮಹಿಳೆ ಅಪಹರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿತ್ತು. ಬಳಿಕ ಎರಡು ದಿನಗಳ ಹಿಂದೆ ಮಾಜಿ ಪ್ರಧಾನಿ ದೇವೇಗೌಡರ ಪಧ್ಮನಾಭನಗರದ ಮನೆಯಲ್ಲಿ ಎಚ್‌ಡಿ ರೇವಣ್ಣನನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿದ್ದರು.

ಹೆಚ್ಚಿನ ತನಿಖೆಗೆ ಕಾಲಾವಕಾಶದ ಅಗತ್ಯದ ಹಿನ್ನಲೆಯಲ್ಲಿ ಭಾನುವಾರ ಕೋರಮಂಗಲದ ಎನ್‌ಜಿವಿ ಯಲ್ಲಿರುವ 17ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ರವೀಂದ್ರ ಕುಮಾರ್‌ ಬಿ. ಕಟ್ಟಿಮನಿ ಅವರ ಮುಂದೆ ರೇವಣ್ಣ ರನ್ನು ಹಾಜರುಪಡಿಸಿದರು. ಜೊತೆಗೆ ವಿಚಾರಣೆಗಾಗಿ ಐದು ದಿನಗಳ ಕಾಲಾವಕಾಶಕ್ಕೆ ಮನವಿ ಮಾಡಿದರು. ವಾದ ವಿವಾದಗಳನ್ನು ಆಲಿಸಿದ ನ್ಯಾಯಾಧೀಶರು ಮೇ 8 ವರೆಗೆ ರೇವಣ್ಣರನ್ನು ಎಸ್‌ಐಟಿ ಕಸ್ಟಡಿ ವಹಿಸುವಂತೆ ಆದೇಶ ಹೊರಡಿಸಿದರು.

Tags: